ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 11.10.2024

ಮೇಷ: ಲೇವಾದೇವಿ ವ್ಯವಹಾರದಲ್ಲಿ ತೊಡಗುವಿರಿ. ಆತ್ಮೀಯ-ಬಂಧುಗಳಿಗಾಗಿ ಖರ್ಚು. ನರ ದೌರ್ಬಲ್ಯ ಸಮಸ್ಯೆ. ದೇಹದಲ್ಲಿ ಆಯಾಸ.

ವೃಷಭ: ಬೇಡದ ವಿಷಯಗಳಲ್ಲಿ ಆಸಕ್ತಿ ಬೇಡ. ಯತ್ನ ಕಾರ್ಯ ಗಳಿಗೆ ಅಡೆತಡೆ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ. ಮನೆಯಲ್ಲಿ ಸಂತಸ.

ಮಿಥುನ: ಆಸ್ತಿ ವಿಚಾರಗಳಲ್ಲಿ ಎಚ್ಚರ. ಕೃಷಿಯಲ್ಲಿ ಲಾಭ. ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ಸರಿ-ತಪ್ಪು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಕಟಕ: ದೇವತಾ ಕಾರ್ಯಗಳಲ್ಲಿ ಭಾಗಿ. ವಿವಾಹ ಯೋಗ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಮನಕ್ಲೇಷ. ಸ್ನೇಹಿತರೊಂದಿಗೆ ವಿರೋಧ.

ಸಿಂಹ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಇಷ್ಟ ವಸ್ತುಗಳ ಖರೀದಿ. ಚಂಚಲ ಮನಸ್ಸು. ಮಾತುಗಳಿಂದ ಕಲಹ ಸಂಭವ. ದಂಡ ಕಟ್ಟುವಿರಿ.

ಕನ್ಯಾ: ಆತ್ಮೀಯರಲ್ಲಿ ಕಲಹ. ರಾಜಭಯ, ಯೋಚಿಸಿ ಮಾತಾಡಿ. ವಾಹನ ದುರಸ್ತಿಗೆ ಖರ್ಚು. ಯಾರನ್ನೂ ಹೆಚ್ಚಾಗಿ ನಂಬಬೇಡಿ.

ತುಲಾ: ಪಾಲುದಾರಿಕೆ ಮಾತುಕತೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ. ಅನಾರೋಗ್ಯ. ಕೋರ್ಟ್ ಕಾರ್ಯ ವಿಫಲ. ಸಾಲಬಾಧೆ.

ವೃಶ್ಚಿಕ: ದುಡುಕಿನಿಂದ ಉದ್ಯೋಗ ನಷ್ಟ. ಗುರು-ಹಿರಿಯರಲ್ಲಿ ಭಕ್ತಿ. ದಾಂಪತ್ಯದಲ್ಲಿ ಪ್ರೀತಿ. ಶಸ್ತ್ರಚಿಕಿತ್ಸೆ ಸಾಧ್ಯತೆ. ಕುಟುಂಬದಲ್ಲಿ ಅಶಾಂತಿ.

ಧನಸ್ಸು: ಸ್ತ್ರೀಯರಿಗೆ ವಸ್ತ್ರಾಭರಣ ಲಾಭ. ಪುಣ್ಯಕ್ಷೇತ್ರ ದರ್ಶನ. ಹೊಸ ವ್ಯವಹಾರದಿಂದ ಲಾಭ. ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

ಮಕರ: ಬಣ್ಣದ ಮಾತಿಗೆ ಮರುಳಾಗದಿರಿ. ಉದ್ಯೋಗ ಕ್ಷೇತ್ರದಲ್ಲಿ ದ್ರೋಹ. ಅತಿಯಾದ ಆತ್ಮವಿಶ್ವಾಸ ದಿಂದ ಸಮಸ್ಯೆಗೆ ಸಿಲುಕುವಿರಿ.

ಕುಂಭ: ಧರ್ಮದಲ್ಲಿ ಆಸಕ್ತಿ. ರೆಸ್ಟೋರೆಂಟ್ ವ್ಯವಹಾರಗಳಲ್ಲಿ ಮಂದಗತಿ. ಖರ್ಚಿನ ಬಗ್ಗೆ ನಿಗಾ ಇರಲಿ. ರಾಜಕಾರಣಿಗಳಿಗೆ ಗೊಂದಲ.

ಮೀನ: ಕಲಾವಿದರಿಗೆ ಅಲ್ಪ ಪ್ರಗತಿ. ವರಾನ್ವೇಷಣೆಯಲ್ಲಿ ಗೊಂದಲ. ಜೇನು ಕೃಷಿಯಲ್ಲಿ ಪ್ರಗತಿ. ವೈರಿಗಳಿಂದ ದೂರವಿರಿ. ಸ್ಥಿರಾಸ್ತಿ ಖರೀದಿ.

Edited By : Nirmala Aralikatti
PublicNext

PublicNext

11/10/2024 07:21 am

Cinque Terre

16.36 K

Cinque Terre

0