ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಕೊಠಡಿಗೆ CISF, TATA, CPWD ಪ್ರಾಜೆಕ್ಟ್‌ ಅಧಿಕಾರಿಗಳಿಂದ ಅನಧಿಕೃತ ಪ್ರವೇಶ - ರಾಜ್ಯಸಭಾ ಅಧ್ಯಕ್ಷರಿಗೆ ಖರ್ಗೆ ಪತ್ರ

ನವದೆಹಲಿ: ಕೇಂದ್ರ ಲೋಕೋಪಯೋಗಿ ಇಲಾಖೆ (CPWD), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಮತ್ತು ಟಾಟಾ ಪ್ರಾಜೆಕ್ಟ್‌ಗಳ ಅಧಿಕಾರಿಗಳು ತಮಗೆ ಮಾಹಿತಿ ನೀಡದೆ ಸಂಸತ್ತಿನ ಕೊಠಡಿಗೆ ಪ್ರವೇಶಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಖರ್ ಅವರಿಗೆ ಪತ್ರ ಬರೆದಿದ್ದಾರೆ.

ಸೆಪ್ಟೆಂಬರ್ 28, 2024ರಂದು, ಸಂಸತ್ ಭವನದಲ್ಲಿ ನನ್ನ ಚೇಂಬರ್ ಕೊಠಡಿ ಸಂಖ್ಯೆ ಜಿ-19ನ್ನು CPWD, CISF ಮತ್ತು ಟಾಟಾ ಪ್ರಾಜೆಕ್ಟ್‌ಗಳ ಅಧಿಕಾರಿಗಳು ನನಗೆ ಅಥವಾ ನನ್ನ ಕಚೇರಿಗೆ ಯಾವುದೇ ಪೂರ್ವ ಸೂಚನೆಯಿಲ್ಲದೆ ಪ್ರವೇಶಿಸಿದ್ದಾರೆ ಎಂದು ತಿಳಿದು ನನಗೆ ತುಂಬಾ ಆಘಾತವಾಗಿದೆ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ತಮ್ಮ ದೂರಿಗೆ ಸೂಕ್ತ ಮಹತ್ವ ನೀಡಬೇಕು. ಇದೊಂದು ಅಸಾಧಾರಣ ಬೆಳವಣಿಗೆ. ಇದು ಸಂಸತ್ತಿನ ಸದಸ್ಯನಾಗಿ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾಗಿ ನನ್ನ ಸವಲತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಕ್ರಮವಾಗಿದೆ ಎಂದು ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ಹೇಳಿದ್ದಾರೆ.

ಈ ಅಕ್ರಮ ಪ್ರವೇಶ ನನಗೆ ಮತ್ತು ನನ್ನ ಸ್ಥಾನಕ್ಕೆ ಅಗೌರವವಾಗಿದ್ದು, ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಯಾರ ಅಧಿಕಾರ ಮತ್ತು ಸೂಚನೆಗಳ ಅಡಿಯಲ್ಲಿ ಅನುಮತಿಯಿಲ್ಲದೆ ನನ್ನ ಕೋಣೆಗೆ ಪ್ರವೇಶಿಸಿದ್ದಾರೆ ಎಂಬುದು ನನಗೆ ಗೊತ್ತಾಗಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರಾಜ್ಯಸಭಾ ಅಧ್ಯಕ್ಷ ಧನ್‌ಖರ್ ಅವರಿಗೆ ಒತ್ತಾಯಿಸಿದ್ದಾರೆ.

Edited By : Vijay Kumar
PublicNext

PublicNext

05/10/2024 10:26 pm

Cinque Terre

36.21 K

Cinque Terre

0

ಸಂಬಂಧಿತ ಸುದ್ದಿ