ಕರ್ನಾಟಕದಲ್ಲಿ ತಯಾರಾಗುವ ಕೇಕ್ ಗಳಲ್ಲಿ ಬಳಸುವ ವಸ್ತುಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದ್ದು,ರಾಜ್ಯ ಸರ್ಕಾರವು ವಾರ್ನಿಂಗ್ ನೀಡಿದೆ.ನಗರದ ಹಲವು ಬೇಕರಿಗಳಿಂದ ಕೇಕ್ ಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು,ಅದರಲ್ಲಿ 12 ಕೇಕ್ ಮಾದರಿಗಳಲ್ಲಿ ಹಲವಾರು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ.ರಾಜ್ಯ ಸರ್ಕಾರವು ಪರೀಕ್ಷಿಸಿದ 235 ಕೇಕ್ ಮಾದರಿಗಳಲ್ಲಿ 223 ಸುರಕ್ಷಿತವೆಂದು ಕಂಡುಬಂದರೆ, 12 ಅಪಾಯಕಾರಿ ಮಟ್ಟದ ಕೃತಕ ಬಣ್ಣಗಳನ್ನು ಒಳಗೊಂಡಿದೆ ಎಂದು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ..ಕೇಕ್ ಅತ್ಯಾಕರ್ಷಕವಾಗಿ ಕಾಣಲು ಬಳಸುವ ಕಡು ಕೆಂಪು ಬಣ್ಣ,ವೆಲ್ವೆಟ್,ಡಾರ್ಕ್ ಫಾರೆಸ್ಟ್ ನಂತಹ ಕೇಕ್ ಗಳು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.ಈ ಹಿಂದೆ ಸರಕಾರವು ಆರೋಗ್ಯದ ದೃಷ್ಟಿಯಿಂದ ಕಾಟನ್ ಕ್ಯಾಂಡಿ,ಗೋಬಿ ಮಂಚೂರಿಯಲ್ಲಿ ಆರ್ಟಿಫಿಶಿಯಲ್ ಫುಡ್ ಕಲರ್ಸ್ ರೋಡಮೈನ್-ಬಿ ಸೇರಿದಂತೆ ಕೃತಕ ಆಹಾರ ಬಣ್ಣಗಳನ್ನು ಬಳಸಿದ್ದರಿಂದ ಅವುಗಳನ್ನು ಬ್ಯಾನ್ ಮಾಡಿತ್ತು.
PublicNext
05/10/2024 04:24 pm