ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ವ್ಹೀಲಿಂಗ್ ಮಾಡಿದ ಯುವಕನ ಪೋಷಕರ ಮೇಲೆ ದೂರು ದಾಖಲು

ಬೆಂಗಳೂರು : ವ್ಹೀಲಿಂಗ್ ಮಾಡಿದ ಯುವಕನ ಪೋಷಕರ ಮೇಲೆ ಬೆಂಗಳೂರಿನ ತಲಘಟ್ಟಪುರ ಪೊಲೀಸರು ದೂರು ದಾಖಲಿಸಿದ್ದಾರೆ. ಕಳೆದ ಸೆಪ್ಟೆಂಬರ್ 29ರಂದು ತಲಘಟ್ಟಪುರದ 80 ಅಡಿ ಮುಖ್ಯ ರಸ್ತೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ತನ್ನ ಹೋಂಡಾ ಆಕ್ಟಿವಾ ಗಾಡಿಯಲ್ಲಿ ವೀಲಿಂಗ್ ಮಾಡಿದ್ದಾನೆ. ತನ್ನ ಸ್ಟಂಟ್ ಮೂಲಕ ಇತರೆ ಸವಾರರಿಗೆ ಕಿರಿಕಿರಿ ಉಂಟು ಮಾಡಿದ್ದಾನೆ .

ವೀಲಿಂಗ್ ವಿಡಿಯೋ ಪೋಸ್ಟ್ ಮಾಡಿದ ಸೋಶಿಯಲ್ ಮೀಡಿಯಾ ಅಕೌಂಟ್ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹುಡುಗ ಅಪ್ರಾಪ್ತ ಆಗಿರೋ ಕಾರಣ ಪೋಷಕರ ಮೇಲೆ ತಲಘಟ್ಟಪುರ ಪೊಲೀಸ್ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Edited By : Suman K
PublicNext

PublicNext

05/10/2024 12:26 pm

Cinque Terre

22.78 K

Cinque Terre

1