ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಮಹಿಳೆಯರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ

ಹಾವೇರಿ : ಅನಧಿಕೃತ ಗರ್ಭಕೋಶ ಕಳೆದುಕೊಂಡ ಮಹಿಳೆಯರು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಹಶೀಲ್ದಾರ್ ಕಚೇರಿ ಮುಂದೆ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎರಡನೇಯ ದಿನವಾದ ಗುರುವಾರ ಮಹಿಳೆಯರು ನೇಣು ಬಿಗಿದುಕೊಳ್ಳುವ ಅಣಕು ಪ್ರದರ್ಶನ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಯುವ ಸ್ಥಳದಲ್ಲಿ ಸೀರೆಗಳಿಂದ ನೇಣುಬಿಗಿದುಕೊಳ್ಳುವ ಮೂಲಕ ಅಣಕು ಪ್ರದರ್ಶನ ನಡೆಸಿದರು. ತಮಗೆ ಆದಷ್ಟು ಬೇಗ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು. ನಮಗೆ ಅನ್ಯಾಯವಾದಾಗಿನಿಂದ ಐದು ಜನ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೇವೆ ನೂರಾರು ಬಾರಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದೇವೆ ನಮಗೆ ನ್ಯಾಯ ಸಿಕ್ಕಿಲ್ಲಾ ಎಂದು ಮಹಿಳೆಯರು ಆರೋಪಿಸಿದರು.

ಹಲವು ಬಾರಿ ಪ್ರತಿಭಟನೆ ಮಾಡಿದ್ದಾರೆ ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲಾ ಇದೀಗ ಕೊನೆಯದಾಗಿ ಮಾಡು ಇಲ್ಲವ ಮಡಿ ಎನ್ನುವ ಘೋಷವ್ಯಾಕ್ಯದೊಂದಿದೆ ರಾಣೆಬೆನ್ನೂರು ತಹಶಿಲ್ದಾರ್ ಕಚೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಇಳಿದಿದ್ದಾರೆ.

Edited By : Vinayak Patil
PublicNext

PublicNext

03/10/2024 07:32 pm

Cinque Terre

21.01 K

Cinque Terre

0