ಹಾವೇರಿ : ಮಹಾತ್ಮಾ ಗಾಂಧಿಜಿ ಮೂಲ ಶಿಕ್ಷಣ ತತ್ವ ಸಿದ್ದಾಂತದ ಕನಸು ಸಾಕಾರಗೊಂಡಿರುವ ಶಾಲೆಯೊಂದು ಹಾವೇರಿ ತಾಲೂಕು ಹೊಸರಿತ್ತಿಯಲ್ಲಿದೆ. ಗಾಂಧಿ ಗ್ರಾಮೀಣ ಗುರುಕುಲ ಹೆಸರಿನ ಈ ಶಾಲೆ 1984 ಅಕ್ಟೋಬರ್ 2 ರಂದು ಸ್ಥಾಪಿತವಾಗಿದೆ.
ಗಾಂಧಿಜಿ ಒಡನಾಡಿ ಗಾಂಧಿವಾದಿ ಗುದ್ಲೆಪ್ಪ ಹಳ್ಳಿಕೇರಿ ಸ್ಥಾಪಿಸಿರುವ ಈ ಶಾಲೆಯಲ್ಲಿ ಗ್ರಾಮೀಣ ಪ್ರತಿಭಾವಂತ 220ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಪ್ರತಿಯೊಬ್ಬರಲ್ಲಿ ಗಾಂಧಿಜಿ ತತ್ವಗಳು ಮೈದಳಿದಂತೆ ಶಿಕ್ಷಕರು ಇಲ್ಲಿ ಬೋಧನೆ ಮಾಡುತ್ತಿದ್ದಾರೆ.
5ನೇ ತರಗತಿಯಿಂದ ಆರಂಭವಾಗುವ ಇಲ್ಲಿ ಶಿಕ್ಷಣ 10ನೇ ತರಗತಿಯವರೆಗೆ ಮುಂದುವರೆಯುತ್ತೆ. ಈ 6 ವರ್ಷಗಳಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಜಗತ್ತಿನ ಸ್ವಾವಲಂಬಿ ಜೀವನ ನಡೆಸುವ ಆತ್ಮವಿಶ್ವಾಸವನ್ನ ಇಲ್ಲಿ ಮೂಡಿಸಲಾಗುತ್ತದೆ.
ಗೋಶಾಲೆ, ರೇಷ್ಮೆಗಾರಿಕೆ ಜೀನುಸಾಕಾಣಿಕೆ ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ಇಲ್ಲಿಯ ಮಕ್ಕಳಿಗೆ ಕಲಿಸಲಾಗುತ್ತದೆ. ಇಲ್ಲಿಯ ಮಕ್ಕಳು ಶುದ್ದ ಸಸ್ಯಹಾರಿಗಳು,, ಬಡ ಮತ್ತು ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಇಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಪ್ರಸ್ತುತ ವರ್ಷದ ಗಾಂಧಿ ಸೇವಾ ಪ್ರಶಸ್ತಿಗೆ ಶಾಲೆ ಆಯ್ಕೆಯಾಗಿರುವದು ಶಾಲೆಗೆ ಮತ್ತೊಂದು ಗರಿಮೆ ತಂದುಕೊಟ್ಟಿದೆ. ಈ ಗಾಂಧಿತತ್ವ ಸಾಕಾರಾಗೊಳಿಸುತ್ತಿರುವ ಈ ಶಾಲೆ ರಾಜ್ಯಕ್ಕೆ ಮಾದರಿ ಶಾಲೆಯಾಗಿದೆ.
PublicNext
01/10/2024 10:17 pm