ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಶೋಧನಾ‌ ಪ್ರಬಂಧ ಪ್ರಸ್ತುತಿ: ಬಿಮ್ಸ್ ವಿದ್ಯಾರ್ಥಿನಿ ಜೋಯಾಗೆ ತೃತೀಯ ಬಹುಮಾನ

ಬೆಳಗಾವಿ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಬಿಮ್ಸ್) ಅಂತಿಮ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿನಿಯಾದ ಜೋಯಾ ತೆಬಲಾ ಕಸ್ತೂರ್ಬಾ ವೈದ್ಯಕೀಯ ಕಾಲೇಜು (KMC) ಆಯೋಜಿಸಿದ್ದ ವೇದಮ್ - ಪದವಿ ಪೂರ್ವ ವೈದ್ಯಕೀಯ ಸಮ್ಮೇಳನದಲ್ಲಿ ನಡೆದ ಮೌಖಿಕ ಸಂಶೋಧನಾ ಪ್ರಬಂಧ ಪ್ರಸ್ತುತಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು ಗಳಿಸಿದ್ದಾರೆ.

ಮಣಿಪಾಲನಲ್ಲಿ‌ ಈಚೆಗೆ ನಡೆದ ಮೌಖಿಕ ಪ್ರಬಂಧ ಸ್ಪರ್ಧೆಯಲ್ಲಿ "ತೃತೀಯ ಆರೈಕೆ ಆಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ ರೋಗಿಗಳಲ್ಲಿ ಪ್ಲೇಟ್‌ಲೆಟ್ ಸೂಚ್ಯಂಕಗಳು ಮತ್ತು ಡೆಂಗ್ಯೂ ಜ್ವರದ ಮೊರ್ಬಿಡಿಟಿ ಪ್ರೊಫೈಲ್ ಸಂಬಂಧ" - ಒಂದು ವೀಕ್ಷಣಾ ಅಧ್ಯಯನದ ಶೀರ್ಷಿಕೆ ಅಡಿಯಲ್ಲಿ - ಪ್ರಬಂಧವನ್ನು ಮಂಡಿಸಿದ್ದರು.

ಬಿಮ್ಸ್ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ, ಡಾ. ಅಶ್ವಿನಿ ಚಿಂಗಲೆ ಸಹಾಯಕ ಪ್ರಾಧ್ಯಾಪಕರು, ಸಮುದಾಯ ವೈದ್ಯಕೀಯ ವಿಭಾಗ ಮತ್ತು ಡಾ. ಚಿನ್ಮಯಿ ಜೋಶಿ ಸಹಾಯಕ ಪ್ರಾಧ್ಯಾಪಕರು, ಪೀಡಿಯಾಟ್ರಿಕ್ಸ್ ವಿಭಾಗ ಡಾ. ಆರ್.ಜಿ.ವಿವೇಕಿ, ಸಮುದಾಯ ವೈದ್ಯ ವಿಭಾಗದ ಮುಖ್ಯಸ್ಥರು, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಶೈಲೇಶ್ ಪಾಟೀಲ್ ಮತ್ತು ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ. ರೇಖಾ ಹರವಿಹಾಗೂ ಬಿಮ್ಸ್ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

27/09/2024 08:05 pm

Cinque Terre

18.22 K

Cinque Terre

0

ಸಂಬಂಧಿತ ಸುದ್ದಿ