ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : ಮನಸೂರೆಗೊಂಡ ಮಕ್ಕಳ ಕಲಿಕಾ ಚಟುವಟಿಕೆ ಕಾರ್ಯಕ್ರಮ

ಅಥಣಿ : ತಾಲೂಕಿನ ಹಳ್ಯಾಳ ಗ್ರಾಮದ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳ ಕಲಿಕಾ ಚಟುವಟಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಆಟೋಪಕರಣಗಳ ಪ್ರದರ್ಶನ ಮಾಡುವ ಮೂಲಕ ನೆರೆದವರ ಗಮನ ಸೆಳೆದರು..

ಮಕ್ಕಳಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಶಾಲಾ ಆಡಳಿತ ಮಂಡಳಿಯು ಉತ್ತಮ ವೇದಿಕೆ ನೀಡುವುದರೊಂದಿಗೆ ಮಕ್ಕಳ ಜೊತೆಯಲ್ಲಿ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಸೌಧ ಹಾಗೂ ಕರ್ನಾಟಕ ನಕ್ಷೆ ಚಿತ್ರ ಬಿಡಿಸಿದ ಮಕ್ಕಳು ವಿವಿಧ ಭೌಗೋಳಿಕ ಅಧ್ಯಯನ, ವಿಜ್ಞಾನ, ಹಾಗೂ ಪರಿಸರ ಜಾಗೃತಿ ಚಿತ್ರಗಳನ್ನು ಬಿಡಿಸಿ ವಿವರಣೆ ನೀಡುವ ಮೂಲಕ ಬಂದ ಗಣ್ಯರಿಗೆ ಗೌರವ ತೋರಿ ನಾವು ಖಾಸಗಿ ಶಾಲೆ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ ಎಂಬುದನ್ನ ತೋರಿಸಿ ಕೊಟ್ಟರು.

Edited By : Shivu K
PublicNext

PublicNext

20/12/2024 06:58 pm

Cinque Terre

19.54 K

Cinque Terre

0

ಸಂಬಂಧಿತ ಸುದ್ದಿ