ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುನಿರತ್ನ ಜಾಮೀನು ಅರ್ಜಿ : ಆದೇಶ ಕಾಯ್ದಿರಿಸಿದ ಕೋರ್ಟ್ ಇಂದು ಜೈಲೇ ಗತಿ

ಬೆಂಗಳೂರು : ಆರ್‌.ಆರ್‌.ನಗರದ ಶಾಸಕ ಮುನಿರತ್ನ ಗುತ್ತಿಗೆದಾರನಿಗೆ ಜೀವ ಬೇದರಿಕೆ ಮತ್ತು ಜಾತಿನಿಂದನೆ ಮಾಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಇಂದು ಅರ್ಜಿ ವಿಚಾರನೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶವನ್ನು ನಾಳೆಗೆ ಗುರುವಾರಕ್ಕೆ (ಸೆ.19) ಕಾಯ್ದಿರಿಸಿದೆ.

ಮುನಿರತ್ನ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಕುರಿತ ಅರ್ಜಿಯನ್ನು, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಬುಧವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಿ.ಎಸ್.ಪ್ರದೀಪ್ ಕುಮಾರ್ ಆರೋಪಿಯ ಜಾಮೀನು ಅರ್ಜಿಗೆ ಸುದೀರ್ಘ ಆಕ್ಷೇಪಣೆ ಸಲ್ಲಿಸಿದರು. ಮುನಿರತ್ನ ಪರ ಹೈಕೋರ್ಟ್ ಹಿರಿಯ ವಕೀಲ‌ ಅಶೋಕ ಹಾರನಹಳ್ಳಿ ವಾದ ಮಂಡಿಸಿದರು.

Edited By : Nirmala Aralikatti
PublicNext

PublicNext

18/09/2024 02:19 pm

Cinque Terre

67.84 K

Cinque Terre

1

ಸಂಬಂಧಿತ ಸುದ್ದಿ