ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಮೆಸ್ಕಾಂ ಲೈನ್‌ಮೆನ್ ಮಲಗಿದಲ್ಲಿಯೇ ಸಾವು

ಕಾಪು: ಮೆಸ್ಕಾಂ ಪಡುಬಿದ್ರಿ ಶಾಖೆಯಲ್ಲಿ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಉದ್ಯಾವರ ಗ್ರಾಮದ ಕಿಶೋರ್ ಕುಮಾರ್(49) ಎಂಬವರು ರಾತ್ರಿ ಮಲಗಿದಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ.

ಕಳೆದ 20 ವರ್ಷಗಳಿಂದ ಲೈನ್‌ಮೆನ್ ಆಗಿದ್ದ ಇವರು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ರಾತ್ರಿ ಮಲಗಿದ್ದ ಅವರು, ಬೆಳಗ್ಗೆ ಎಬ್ಬಿಸುವಾಗ ಏಳದೇ ಅಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

16/09/2024 12:10 pm

Cinque Terre

2 K

Cinque Terre

0

ಸಂಬಂಧಿತ ಸುದ್ದಿ