ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈನ ಲಾಲ್‌ಬೌಚಾ ರಾಜಾದಲ್ಲಿ ‘ವಿಐಪಿ ಸಂಸ್ಕೃತಿ’? - ವಿಡಿಯೋ ವೈರಲ್ ಬೆನ್ನಲ್ಲೇ ನೆಟ್ಟುಗರು ಗರಂ

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಲಾಲ್‌ಬಾಗ್‌ನಲ್ಲಿರುವ ಪ್ರಸಿದ್ಧ ಗಣೇಶ ಮೂರ್ತಿಯಾದ ಲಾಲ್‌ಬಾಗ್ಚಾ ರಾಜಾದಲ್ಲಿ ಕಂಡು ಬಂದ 'ವಿಐಪಿ ಸಂಸ್ಕೃತಿ'ಗೆ ನೆಟ್ಟಿಗರು ಆಕ್ರೋಶ ವ್ಯಕ್ತವಾಗುತ್ತಿದೆ.

ಹೌದು. ಸಾಮಾಜಿಕ ಜಾಲತಾಣ X ನಲ್ಲಿ ವೈರಲ್ ಆಗಿರುವ ವಿಡಿಯೋ ಇದಕ್ಕೆ ಮುಖ್ಯ ಕಾರಣ. ಈ ವಿಡಿಯೋ ಒಂದೇ ಚೌಕಟ್ಟಿನಲ್ಲಿ ಎರಡು ಗಮನಾರ್ಹ ದೃಶ್ಯಗಳನ್ನು ತೋರಿಸುತ್ತದೆ, ಅದು ನಂಬಿಕೆ ಮತ್ತು ಸಮಾನತೆಯ ಬಗ್ಗೆ ಜನರಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.

ಒಂದು ಕಡೆ ಕೆಲವು ಭಕ್ತರು ಗಣೇಶ ಮೂರ್ತಿಯ ಮುಂದೆ ಆರಾಮವಾಗಿ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ಇನ್ನು ಮತ್ತೊಂದು ಬದಿಯಲ್ಲಿ ಸರತಿ ಸಾಲಿನಲ್ಲಿ ಬಂದ ಭಕ್ತರನ್ನು ಪಕ್ಕಕ್ಕೆ ತಳ್ಳುವ ದೃಶ್ಯವನ್ನು ಕಾಣಬಹುದಾಗಿದೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರೊಬ್ಬರು, 'ಧರ್ಮವನ್ನು ಶ್ರೀಮಂತರಿಗೆ ಮಾರಾಟ ಮಾಡಲಾಗಿದೆ' ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Edited By : Vinayak Patil
PublicNext

PublicNext

15/09/2024 04:47 pm

Cinque Terre

52.04 K

Cinque Terre

11