ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಸ್ಟ್‌ 1 ಸೆಂಟಿಮೀಟರ್‌ನಿಂದ ಡೈಮಂಡ್ ಟ್ರೋಫಿ ಕೈಚೆಲ್ಲಿದ ನೀರಜ್ ಚೋಪ್ರಾ

ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ 2024 ಪುರುಷರ ಜಾವೆಲಿನ್ ಫೈನಲ್‌ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ನೀರಜ್ ಚೋಪ್ರಾ ಅವರು 87.86 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ದಾಖಲಿಸಿದರು. ಆದರೂ ಡೈಮಂಡ್ ಟ್ರೋಫಿಯನ್ನು ಒಂದು ಸೆಂಟಿಮೀಟರ್‌ನಿಂದ ಕಳೆದುಕೊಂಡರು. ಏಕೆಂದರೆ ಗ್ರೆನಡಾದ ಆಂಡರ್ಸನ್ ಪೀಟರ್ಸ್ 87.87 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಮೊದಲ ಸ್ಥಾನ ಪಡೆದರು. ನೀರಜ್ 2022ರಲ್ಲಿ ಡೈಮಂಡ್ ಟ್ರೋಫಿ ಗೆದ್ದಿದ್ದರು ಮತ್ತು 2023 ರಲ್ಲಿ ಎರಡನೇ ಸ್ಥಾನ ಗಳಿಸಿದ್ದರು.

Edited By : Vijay Kumar
PublicNext

PublicNext

15/09/2024 08:07 am

Cinque Terre

34.06 K

Cinque Terre

0

ಸಂಬಂಧಿತ ಸುದ್ದಿ