ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ತಗ್ಗಿದ ಡೆಂಘೀ ಆರ್ಭಟ

ಬೆಂಗಳೂರು: ರಾಜ್ಯದಲ್ಲಿ ಇಲ್ಲಿಯವರೆಗೂ 26,323 ಡೆಂಘೀ ಕೇಸ್ ದಾಖಲಾಗಿದ್ದು, ಡೆಂಘೀ ಓಟಕ್ಕೆ ಬ್ರೇಕ್ ಬಿದ್ದಿದೆ. ಇದುವರೆಗೆ ಡೆಂಘೀಯಿಂದ ಗುಣಮುಖರಾದವರ ಸಂಖ್ಯೆ ಕೂಡ 25,249ಕ್ಕೆ ತಲುಪಿದ್ದು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ರಾಜ್ಯದಲ್ಲಿ ಸಕ್ರಿಯವಾಗಿರುವ 1062 ಡೆಂಘೀ ಪ್ರಕರಣಗಳು ಇದ್ದು ಇಲ್ಲಿಯವರೆಗೆ ಡೆಂಘೀ ಜ್ವರಕ್ಕೆ 12 ಮಂದಿ ಬಲಿ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 103 ಮಂದಿ ಡೆಂಘೀ ದೃಢಪಟ್ಟಿದ್ದು, ಕಳೆದ 24 ಗಂಟೆಯಲ್ಲಿ 1- 6 ವರ್ಷದ 6 ಮಕ್ಕಳಿಗೆ ಡೆಂಘೀ ಪತ್ತೆ ಆಗಿದೆ.

ಇಲ್ಲಿಯವರೆಗೂ 1-6 ವರ್ಷದೊಳಗಿನ 547 ಮಕ್ಕಳಲ್ಲಿ ಡೆಂಘೀ ದೃಡ ಆಗಿದ್ದು ಕಳೆದ 24 ಗಂಟೆಯಲ್ಲಿ 1-18 ವರ್ಷದೊಳಗಿನ 33 ಮಂದಿಯಲ್ಲಿ ಡೆಂಘೀ ಪತ್ತೆ ಆಗಿದೆ. ಇಲ್ಲಿಯವರೆಗೂ 1- 18 ವರ್ಷದೊಳಗಿನ 9391 ಮಂದಿಯಲ್ಲಿ ಡೆಂಘೀ ದೃಡ ಆಗಿದ್ದು ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 64 ಜನರಲ್ಲಿ ಡೆಂಘೀ ಪತ್ತೆ ಆಗಿದೆ. ಇಲ್ಲಿಯವರೆಗೂ 18 ವರ್ಷ ಮೇಲ್ಪಟ್ಟ 16,385 ಮಂದಿಗೆ ಡೆಂಘೀ ದೃಢವಾಗಿದೆ.

Edited By : Vijay Kumar
PublicNext

PublicNext

09/09/2024 09:00 am

Cinque Terre

40.47 K

Cinque Terre

0