ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ - ಕನ್ನಡಿಗ ಕೆಎಲ್‌ಗೆ ಚಾನ್ಸ್

ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದೆ.

ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ರಿಷಬ್ ಪಂತ್ ಟೆಸ್ಟ್ ತಂಡಕ್ಕೆ ಮರಳುತ್ತಿದ್ದಾರೆ. ತಂಡದಲ್ಲಿ ವೇಗಿಗಳಾದ ಯಶ್ ದಯಾಳ್ ಮತ್ತು ಆಕಾಶ್ ದೀಪ್ ಕೂಡ ಇದ್ದಾರೆ. ತಂಡದಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕೂಡ ಇದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್‌ಗೆ ಅವಕಾಶ ನೀಡಲಾಗಿದೆ.

ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್‌ ಕೀಪರ್‌), ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕು‌ಲ್ದೀಪ್‌ ಯಾದವ್, ಮೊಹಮ್ಮದ್. ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.

ಮೊದಲ ಟೆಸ್ಟ್‌ ಪಂದ್ಯ: ಸೆಪ್ಟೆಂಬರ್‌ 19 ರಿಂದ 23ರವೆಗೆ - ಸ್ಥಳ: ಚೆಪಾಕ್ ಸ್ಟೇಡಿಯಂ, ಚೆನ್ನೈ

ಎರಡನೇ ಟೆಸ್ಟ್‌ ಪಂದ್ಯ: ಸೆಪ್ಟೆಂಬರ್‌ 27 ರಿಂದ ಅಕ್ಟೋಬರ್‌ 1 - ಸ್ಥಳ: ಗ್ರೀನ್‌ ಪಾರ್ಕ್‌ ಸ್ಟೇರಿಯಂ, ಖಾನ್‌ಪುರ

Edited By : Vijay Kumar
PublicNext

PublicNext

09/09/2024 07:34 am

Cinque Terre

21.27 K

Cinque Terre

0

ಸಂಬಂಧಿತ ಸುದ್ದಿ