ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಜಾಗೃತರಾಗಬೇಕು-ಡೇನಿಯಲ್ ದೇವರಾಜ್

ಮುಲ್ಕಿ:ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಕಾಲೇಜು ನಲ್ಲಿ ಐ ಕ್ಯೂ ಸಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ 2024-25ನೇ ಸಾಲಿಗೆ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ದಿನ , ಸಂಸ್ಥಾಪಕರ ದಿನ ಹಾಗೂ ಕಾಲೇಜಿನ ವಿವಿಧ ಸಂಘಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು

ವಕೀಲ ಹಾಗೂ ನೋಟರಿ ಡೇನಿಯಲ್ ದೇವರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತರಾಗಿ ಶಿಕ್ಷಣಕ್ಕೆ ಮಹತ್ವ ನೀಡಿ ಸಾಧಕರಾಗಬೇಕು ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ರೆ .ಫಾದರ್ ಒಸ್ವಾಲ್ಡ್ ಮೊಂತೆರೊ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ ಪುರುಷೋತ್ತಮ ಕೆ ವಿ, ಇತಿಹಾಸ ಪ್ರಾಧ್ಯಾಪಕಿ ಆಶಿತ ಜೆ ಕ್ಷೇಮಪಾಲನ ಸಮಿತಿಯ ಸಂಯೋಜನಾಧಿಕಾರಿ ಡಾ. ವಿಕ್ಟರ್ ವಾಜ್, ಡಾ. ಮಂಜುನಾಥ್ ಎಸ್. ಎ, ಐ. ಕ್ಯೂ ಎ.ಸಿ ಸಂಯೋಜಕ ಡಾ ಗುಣಕರ್ ಎಸ್ ಮತ್ತಿತರರು ಉಪಸ್ಥಿತರಿದ್ದರು ವಿದ್ಯಾರ್ಥಿನಿ ಶ್ರೇಯಾ ಸಾಲಿನ್ಸ್ ಸ್ವಾಗತಿಸಿದರು. ಯೋಗಾನಂದ ಧನ್ಯವಾದ ಸಲ್ಲಿಸಿದರು.ನಿಷಾದ್ ಮತ್ತು ಪ್ರಜ್ಞ ಕಾರ್ಯಕ್ರಮ ನಿರೂಪಿಸಿದರು

Edited By : PublicNext Desk
Kshetra Samachara

Kshetra Samachara

06/09/2024 09:33 pm

Cinque Terre

3.45 K

Cinque Terre

0

ಸಂಬಂಧಿತ ಸುದ್ದಿ