ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಅವೈಜ್ಞಾನಿಕ ಕೆರೆ ಅಭಿವೃದ್ಧಿ ಕಾಮಗಾರಿ- ಕಬ್ಬಿಣದ ತಡೆಬೇಲಿ, ಎಚ್ಚರಿಕೆ ಬ್ಯಾನರ್ ಅಳವಡಿಕೆ

ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿ ಬಳಿಯ ಎಸ್ ಕೋಡಿ ಎಂಬಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂತರ್ಜಲ ರಕ್ಷಣೆಯ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ ಹಾಗೂ ನಿಧಾನಗತಿಯಿಂದ ನಡೆಯುತ್ತಿದ್ದು, ಮಳೆಗೆ ಕೆರೆ ಮೇಲ್ಭಾಗದ ಮಣ್ಣು ಕೊಚ್ಚಿ ಹೋಗಿದೆ. ಕೆರೆಯ ಒಳಭಾಗದಲ್ಲಿ ತಡೆಗೋಡೆ ನಿರ್ಮಿಸದ ಕಾರಣ‌ ಮೇಲ್ಭಾಗದಲ್ಲಿ ಹಾಕಿದ ಮಣ್ಣು‌ಮತ್ತೆ ಕೆರೆ ಪಾಲಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆಗೆ ಪುನಃ ಮಣ್ಣು ಕೊಚ್ಚಿ ಹೋಗುವ ಭೀತಿ ಎದುರಾಗಿದ್ದು, ಜೊತೆಗೆ ಸಮೀಪದಲ್ಲಿ ರಾಜ್ಯ ಹೆದ್ದಾರಿ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯ 101 ಮನೆಗಳ ಸಂಪರ್ಕ ರಸ್ತೆಗೆ ಸಂಚಕಾರ ಉಂಟಾಗುವ ಸಾಧ್ಯತೆ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಆತಂಕ ವ್ಯಕ್ತಪಡಿಸಿದ್ದು, ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು.

ಬಳಿಕ ಈ ಬಗ್ಗೆ ಎಚ್ಚೆತ್ತ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧಿಕಾರಿಗಳು ಕೆರೆ ಅಭಿವೃದ್ಧಿ ಕಾಮಗಾರಿಯ ಸುತ್ತಲೂ ಭಾರೀ ಗಾತ್ರದ ಕಬ್ಬಿಣದ ತಡೆಬೇಲಿ ಹಾಗೂ ಎಚ್ಚರಿಕೆಯ ಬ್ಯಾನರ್ ಗಳನ್ನೂ ಅಳವಡಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಜನರ ತೆರಿಗೆ ಹಣ ಪೋಲಾಗುತ್ತಿರುವ ಬಗ್ಗೆ ಸಾಮಾಜಿಕ ಕಳಕಳಿಯ ಪಬ್ಲಿಕ್ ನೆಕ್ಸ್ಟ್ ವರದಿಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Edited By : Vinayak Patil
PublicNext

PublicNext

27/07/2024 07:36 am

Cinque Terre

56.59 K

Cinque Terre

1