ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಓಪಿಎಸ್ ಒತ್ತಾಯಿಸಿ 6000 ನೌಕರರಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯ

ಬ್ರಹ್ಮಾವರ: ಹಳೆಯ ಪಿಂಚಣಿ ಯೋಜನೆಯನ್ನೇ ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಸಂಘಟನೆ ಎನ್‌ಎಮ್‌ಒಪಿಎಸ್ ಮತ್ತು ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ದೇಶದಾದ್ಯಂತ ಏಕಕಾಲದಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಹೋರಾಟಕ್ಕೆ ಕರೆಕೊಟ್ಟಿದ್ದಾರೆ. ಇದರ ಅಂಗವಾಗಿ ಉಡುಪಿ ಜಿಲ್ಲೆಯ 6000 ಸರಕಾರಿ ನೌಕರರು ಇಂದು ಪ್ರತಿಭಟನೆ ಸಲ್ಲಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.

ರಾಜ್ಯ ಸರಕಾರದ 72 ಇಲಾಖೆಯ ಉಡುಪಿ ಜಿಲ್ಲೆಯಾದ್ಯಂತ ಸರಕಾರಿ ಕಛೇರಿ, ಶಾಲಾ ಕಾಲೇಜು, ನಿಗಮಮಂಡಳಿ, ನಗರ ಸಭೆ, ಪುರ ಸಭೆ ಪಟ್ಟಣ ಪಂಚಾಯತ್ ನೌಕರರು ಕಪ್ಪು ಪಟ್ಟಿಯೊಂದಿಗೆ ಕರ್ತವ್ಯ ಶಾಂತಿಯುತವಾಗಿ ಕರ್ತವ್ಯ ನಿರ್ವಹಿಸಿ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ ಎಂದರು.

ರಾಜ್ಯ ಕರ್ನಾಟಕ ಸರಕಾರವು ಎನ್‌ಪಿಎಸ್ ರದ್ದುಪಡಿಸಿ ಹಳೆಪಿಂಚಣಿ ಯೋಜನೆ ಮರುಜಾರಿಯ ಬಗ್ಗೆ ಸಮಗ್ರವಾಗಿ ಸಂಘಟನೆಯೊಂದಿಗೆ ಚರ್ಚಿಸಿದ್ದು ಶೀಘ್ರವಾಗಿ ಸಂಪುಟ ಸಭೆಯಲ್ಲಿ ಚರ್ಚಿಸಿ ಹಳೆಪಿಂಚಣಿ ಮರುಜಾರಿಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿಯವರನ್ನು ಕೂಡಾ ಆಗ್ರಹಿಸಲಾಗಿದೆ.

Edited By : Ashok M
PublicNext

PublicNext

07/09/2024 10:14 am

Cinque Terre

44.08 K

Cinque Terre

1

ಸಂಬಂಧಿತ ಸುದ್ದಿ