ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಬೋನಿಗೆ ಬಿದ್ದ ನಾಲ್ಕೇ ದಿನದಲ್ಲಿ ಪತ್ತೆಯಾಯ್ತು ಮತ್ತೆ ಚಿರತೆಯ ಹೆಜ್ಜೆ ಜಾಡು

ಮಂಗಳೂರು: ಮೂರು ತಿಂಗಳಿನಿಂದ ಕಾಟ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿತ್ತು. ಇನ್ನು ಚಿರತೆ ಕಾಟವಿಲ್ಲ ಎಂದು ಗ್ರಾಮಸ್ಥರು ಉಸ್ಸಪ್ಪ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಅದಾಗಿ ನಾಲ್ಕೇ ದಿನಕ್ಕೆ ಮತ್ತೆ ಚಿರತೆಯ ಹೆಜ್ಜೆಜಾಡು ಪತ್ತೆಯಾಗಿದೆ. ಗ್ರಾಮಸ್ಥರ ಎದೆಯಲ್ಲಿ ಮತ್ತೆ ಢವಢವ ಶುರುವಾಗಿದೆ.

ಇದು ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲಿನ ಗುರಿಕಂಡ ಎಂಬಲ್ಲಿ ಕಾಡುವ ಚಿರತೆ ಕಾಟದ ಭೀತಿ. ಮೂರು ತಿಂಗಳ ಹಿಂದೆ ಸ್ಥಳೀಯ ನಿವಾಸಿ ಆನಂದ ಶೆಟ್ಟಿ ಎಂಬವವರ ಮನೆಯಲ್ಲಿ ಅರಣ್ಯ ಇಲಾಖೆ ಬೋನು ಇಟ್ಟಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ ಈ ಬೋನಿನಲ್ಲೊಂದು ಚಿರತೆ ಸೆರೆಯಾಗಿತ್ತು. ಅದಾಗಿ ನಾಲ್ಕೇ ದಿನಕ್ಕೆ ಮತ್ತೆ ಚಿರತೆಯ ಹೆಜ್ಜೆಜಾಡು ಗ್ರಾಮದಲ್ಲಿ ಪತ್ತೆಯಾಗಿದೆ.

Edited By : Manjunath H D
Kshetra Samachara

Kshetra Samachara

07/09/2024 06:06 pm

Cinque Terre

13.08 K

Cinque Terre

0

ಸಂಬಂಧಿತ ಸುದ್ದಿ