ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಗುಜ್ಜಾಡಿ ಭಾಗದ ಮಳೆ ಹಾನಿ ಪ್ರದೇಶಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ, ಜನತಾ ಕಾಲೋನಿ, ಕೊಡಪಾಡಿ, ಹಾಗೂ ಗುಜ್ಜಾಡಿ ಗ್ರಾಮದ ಏಳು ಮನೆಗಳ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ಹಾನಿಯಾದ ಹಿನ್ನೆಲೆಯಲ್ಲಿ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಬೆನ್ನಲ್ಲೇ ಶಾಸಕ ಗುರುರಾಜ್ ಗಂಟಿಹೊಳೆ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ, ತುರ್ತು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿದರು.

ಶಾಸಕರು ನಾಯಕವಾಡಿ ಜನತಾ ಕಾಲೋನಿಗೆ ಭೇಟಿ ನೀಡಿದ ಸಂದರ್ಭ ಸ್ಥಳೀಯ ಮಹಿಳೆಯರು, 40- 50 ವರ್ಷಗಳಿಂದ ನಾವು ಕಾಲೋನಿಯಲ್ಲಿ ವಾಸಿಸುತ್ತಿದ್ದೇವೆ. ನಮಗೆ ಇಲ್ಲಿಯ ತನಕ ಜಾಗದ ದಾಖಲೆ ಪತ್ರ ಲಭಿಸಿಲ್ಲ ಎಂದು ಅಳಲು ತೋಡಿಕೊಂಡರು.

ಆಗ ಗ್ರಾಮ ಆಡಳಿತ ಅಧಿಕಾರಿ ಸೋಮಪ್ಪ ಮಾತನಾಡಿ, ಜನತಾ ಕಾಲೋನಿಯ ಜಾಗದ ದಾಖಲೆ ವಿಚಾರದಲ್ಲಿ ಗೋಮಾಳ‌ ಹಾಗೂ ಡೀಮ್ಡ್ ಫಾರೆಸ್ಟ್ ಆಗಿರುವುದರಿಂದ ವಿಳಂಬ ಆಗಿರೋದಂತೂ ಸತ್ಯ. ಸದ್ಯ ಎಲ್ಲಾ ದಾಖಲೆಗಳನ್ನು ತಹಶೀಲ್ದಾರ್ ಮುಖೇನ ಸರಕಾರಕ್ಕೆ ನೀಡಿದ್ದೇವೆ ಎಂದರು. ಬಹಳಷ್ಟು ವರ್ಷಗಳ ಸಮಸ್ಯೆ ಇದಾಗಿರುವುದರಿಂದ ಶೀಘ್ರ ಇತ್ಯರ್ಥ ಪಡಿಸಿ ನಿವಾಸಿಗಳಿಗೆ ದಾಖಲೆ ಪತ್ರ ನೀಡಬೇಕೆಂದು ಶಾಸಕರು ತಿಳಿಸಿದರು.

ಈ ಸಂದರ್ಭ ಮಾಜಿ ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ., ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಮೇಸ್ತ, ಮಾಜಿ ಸದಸ್ಯ ದೇವದಾಸ್ ಖಾರ್ವಿ, ರಾಘು ಗಾಣಿಗ, ಸ್ಥಳೀಯ ಬಿಜೆಪಿ ಮುಖಂಡ ರವೀಂದ್ರ ಟಿ. ಹಾಗೂ ಬಿಜೆಪಿ ಕಾರ್ಯಕರ್ತರು, ಕಾಲೋನಿ ನಿವಾಸಿಗಳು ಹಾಜರಿದ್ದರು.

ವರದಿ: ದಾಮೋದರ ಮೊಗವೀರ ನಾಯಕವಾಡಿ, ಪಬ್ಲಿಕ್ ನೆಕ್ಸ್ಟ್ ಬೈಂದೂರು

Edited By : Manjunath H D
Kshetra Samachara

Kshetra Samachara

26/07/2024 10:27 pm

Cinque Terre

9.34 K

Cinque Terre

0

ಸಂಬಂಧಿತ ಸುದ್ದಿ