ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ: "ತೀವ್ರಗೊಂಡ ಕಡಲ್ಕೊರೆತ" ವಿಶ್ರಾಂತಿ ಗೃಹ, 35 ತೆಂಗಿನ ಮರ ಸಮುದ್ರಪಾಲು- ಜನ ಕಂಗಾಲು

ಪಡುಬಿದ್ರಿ: ನಡಿಪಟ್ಣ ಬಳಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ಮೀನುಗಾರಿಕೆ ರಸ್ತೆ ಇಬ್ಭಾಗವಾಗುವ ಆತಂಕ ಎದುರಾಗಿದೆ.

ಸುಮಾರು 80ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಪಡುಬಿದ್ರಿ ಗ್ರಾಮದ ನಡಿಪಟ್ಣದಲ್ಲಿ ಭಾರೀ ಕಡಲ್ಕೊರೆತ ಉಂಟಾಗಿದೆ. ಈಗಾಗಲೇ ಸುಮಾರು 35 ತೆಂಗಿನ ಮರಗಳು, ಒಂದು ಮೀನುಗಾರಿಕೆ ಶೆಡ್ ಮತ್ತು ಒಂದು ಮೀನುಗಾರಿಕೆ ವಿಶ್ರಾಂತಿಗೃಹ ಕಡಲ ಒಡಲು ಸೇರಿದೆ.

ಕಡಲ್ಕೊರೆತ ಪ್ರದೇಶಕ್ಕೆ ಈಗಾಗಲೇ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ತಹಶೀಲ್ದಾರ್ ಭೇಟಿ ನೀಡಿ ತುರ್ತು ಕಾಮಗಾರಿಗೆ ಸೂಚಿಸಿದ್ದಾರೆ. ತಡೆಗೋಡೆಗೆ ಹಾಕಿದ ಕಲ್ಲುಗಳು ಸಮುದ್ರ ಪಾಲಾಗುತ್ತಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿದೆ. ಶಾಶ್ವತವಾಗಿ ಸಮುದ್ರ ತಡೆಗೋಡೆ ನಿರ್ಮಿಸಿ ನಮ್ಮನ್ನು ರಕ್ಷಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

Edited By : Vinayak Patil
PublicNext

PublicNext

26/07/2024 08:46 pm

Cinque Terre

59.37 K

Cinque Terre

0