ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಸಮಂತಾ ನಿರ್ಮಾಕರ ಜೊತೆ ಡೇಟಿಂಗ್..!‌ ಇದನ್ನ ನಂಬೋದಾ,ಬಿಡೋದಾ?

ರೆಡ್ಡಿಟ್‌ನಲ್ಲಿ ಹರಿದಾಡುತ್ತಿರುವ ಇತ್ತೀಚಿನ ವದಂತಿಗಳ ಪ್ರಕಾರ ದಕ್ಷಿಣ ಭಾರತದ ಟಾಪ್ ನಟಿ ಸಮಂತಾ ʼಸಿಟಾಡೆಲ್' ನಿರ್ಮಾಪಕ ರಾಜ್ ನಿಡಿಮೋರು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ.ರಾಜ್ ನಿಡಿಮೋರು ತನ್ನ ಮಡದಿ ವೈಶಾಲಿಯಿಂದ ದೂರವಿದ್ದು ಸ್ಯಾಮ್‌ ಜೊತೆ ಡೇಟಿಗ್‌ ಮಾಡ್ತಾ ಇದ್ದಾರೆ ಎಂದು ಬಳಕೆದಾರರು ಕಮೆಂಟ್‌ ಮಾಡುತ್ತಿದ್ದಾರೆ. ಆದರೆ ಈ ಸುದ್ದಿ ಇನ್ನೂ ದೃಢೀಕರಿಸಲ್ಪಟ್ಟಿಲ್ಲ. ಸಮಂತಾ ಹಲವಾರು ವರ್ಷಗಳ ಕಾಲ ನಾಗ ಚೈತನ್ಯ ಜೊತೆ ಡೇಟ್ ಮಾಡಿ ೨೦೧೭ ಮದುವೆಯಾಗಿದ್ದರು. ನಾಲ್ಕು ವರುಷದ ವೈವಾಹಿಕ ಬದುಕಿನ ನಂತರ ವೈಯುಕ್ತಿಕ ಕಾರಣಗಳಿಂದ ಇವರಿಬ್ಬರು ಡಿವೋರ್ಸ್‌ ಪಡೆದು ದೂರವಾಗಿದ್ದಾರೆ. ಅದರ ಮಧ್ಯೆ ಸಮಂತಾಗೆ ವಯೋಸಿಟಿಯಂತಹ ಅಪರೂಪದ ಖಾಯಿಲೆ ಇದ್ದು, ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. 'ಸಿಟಾಡೆಲ್' ನಲ್ಲಿ ನಟಿಸುವ ಮೊದಲು, ಸಮಂತಾ ತನ್ನ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು ರಾಜ್ ಮತ್ತು ಡಿಕೆಯ ಹಿಟ್ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ 'ದಿ ಫ್ಯಾಮಿಲಿ ಮ್ಯಾನ್ 2' (2021) ನಲ್ಲಿ ನಟಿಸಿದ್ದಾರೆ, ಇದು ವರ್ಷದ ಬ್ಲಾಕ್‌ಬಸ್ಟರ್ ಸರಣಿಗಳಲ್ಲಿ ಒಂದಾಗಿದೆ.ಸಮಂತಾ ಇನ್ನೊಬ್ಬರ ಸಂಸಾರ ಹಾಳು ಮಾಡಿ ಬೇಳೆ ಬೇಯಿಸಿಕೊಳ್ಳುವ ನಟಿ ಅಲ್ಲ ಎಂಬುದು ಅವರ ಅಭಿಮಾನಿಗಳ ವಾದ,ಏನೇ ಆಗಲಿ ಸಂಬಂಧಗಳು ವ್ಯಯುಕ್ತಿಕ, ದೂರದಿಂದ ನಾವು ನೋಡಿರುವುದಕ್ಕೂ ನಿಜವಾಗಿ ನಡೆದಿರುವಿದಕ್ಕೂ ವ್ಯತ್ಯಾಸವಿರಬಹುದು.ಯಾವುದಕ್ಕೂ ಅವರಿಬ್ಬರು ಡೇಟಿಂಗ್‌ ವಿಚಾರ ಕನ್‌ ಫಾರ್ಮ್‌ ಮಾಡುವ ವರೆಗೆ ಸುಮ್ಮನೆ ಇದ್ದು ಬಿಡೋಣ.

Edited By : Suman K
PublicNext

PublicNext

26/07/2024 07:45 pm

Cinque Terre

85.09 K

Cinque Terre

7