ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಬ್ಬರು ಪುರುಷರಲ್ಲಿ ಯಾರು ಮಗುವಿನ ತಂದೆ? ನೋಡಿ ಬ್ಯಾಡ್ ನ್ಯೂಜ್

ರೊಮ್ಯಾಂಟಿಕ್ ಕಾಮಿಡಿ ಬ್ಯಾಡ್ ನ್ಯೂಜ್ ಜುಲೈ 19, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ.ವಿಕ್ಕಿ ಕೌಶಲ್, ಟ್ರಿಪ್ಟಿ ಡಿಮ್ರಿ ಮತ್ತು ಆಮಿ ವಿರ್ಕ್, ನೇಹಾ ಧೂಪಿಯಾ ನಟಿಸಿರುವ ಈ ಸಿನಿಮಾದ ಬಗ್ಗೆ ಒಳ್ಳೆ ಅಭಿಪ್ರಾಯ ಕೇಳಿಬರುತ್ತಿದೆ. ಇಶಿತಾ ಮೊಯಿತ್ರಾ ಮತ್ತು ತರುಣ್ ದುಡೇಜಾ ಬರೆದು,ಆನಂದ್ ತಿವಾರಿ ನಿರ್ದೇಶಿಸಿರುವ ಈ ಸಿನಿಮಾದ ಹಾಡು ʼತೌಬಾ ತೌಬಾʼ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಸಿನಿಮಾದ 4 ದಿನಗಳ ಒಟ್ಟು ಕಲೆಕ್ಷನ್‌ ಮೊತ್ತವು 33.35 ಕೋಟಿ ರೂ. ಸಿನಿಮಾದ ಒನ್‌ ಲೈನ್‌ ಸ್ಟೋರಿ ಹೀಗಿದೆ, ಸಲೋನಿ ಬಗ್ಗಾ ( ಟ್ರಿಪ್ಟಿ ಡಿಮ್ರಿ) ಶೆಫ್‌ ಆಗಿದ್ದು, ಯಾರೊಂದಿಗೂ ಯಾವ ಸಂಬಂಧ ಇಟ್ಟು ಕೊಳ್ಳಲು ಬಯಸದೇ ಇಂಡಿಪೆಂಡೆಂಟ್‌ ಆಗಿ ಕೆಲಸ ಮಾಡುತ್ತ ಇರುತ್ತಾಳೆ,ಒಂದು ದಿನ ಅಚಾನಕ್ಕಾಗಿ ಮದುವೆಯೊಂದರಲ್ಲಿ ಅಖಿಲ್ ಚಡ್ಡಾ (ವಿಕ್ಕಿ ಕೌಶಲ್) ಗೆ ಆಕರ್ಷಿತಳಾಗುತ್ತಾಳೆ, ನಂತರ ಟ್ರಯಲ್‌ ಅನ್ನೋತರ ಒಂದಷ್ಟು ದಿನ ಒಟ್ಟಿಗೆ ಇದ್ದು ಮತ್ತೆ ಬೇರ ಆಗ್ತಾರೆ. ನಂತರ ಇನ್ನೊಂದು ಹುಡುಗನ ಜೊತೆ ಆಕರ್ಷಣೆಯಾಗಿ ಆತನ ಜೊತೆಯೂ ದೈಹಿಕ ಸಂಪರ್ಕ ಮಾಡ್ತಾಳೆ, ನಂತರ ಗರ್ಭಿಣಿಯಾಗ್ತಾಳೆ ಆದರೆ ಆ ಮಗುವಿನ ತಂದೆ ಯಾರು ಅನ್ನೋದೆ ಸಿನಿಮಾದ ಒನ್‌ ಲೈನ್‌ ಸ್ಟೋರಿ. ಇಬ್ಬರು ಪುರುಷರಲ್ಲಿ ಯಾರನ್ನು ತನ್ನ ಮಗುವಿನ ತಂದೆಯಾಗಿ ಆರಿಸುತ್ತಾಳೆ ನೋಡಬೇಕಾದರೆ ಬ್ಯಾಡ್ ನ್ಯೂಜ್ ಸಿನಿಮಾ ನೋಡಿ.

Edited By : Somashekar
PublicNext

PublicNext

26/07/2024 02:14 pm

Cinque Terre

68.03 K

Cinque Terre

2