ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮನಪಾ ಕಚೇರಿಗೆ ಕಾರ್ಗಿಲ್ ನೆನಪಿನ ಪ್ರವೇಶದ್ವಾರ

ಮಂಗಳೂರು: ಕಾರ್ಗಿಲ್ ವಿಜಯ ದಿವಸಕ್ಕೆ ಇಂದಿಗೆ 25ವರ್ಷ. ಈ ರಜತ ವರ್ಷವನ್ನು ಮಂಗಳೂರು ಮಹಾನಗರ ಪಾಲಿಕೆಯು ತನ್ನ ಕಚೇರಿಗೆ ಕಾರ್ಗಿಲ್ ನೆನಪಿನ ಪ್ರವೇಶ ದ್ವಾರವನ್ನು ಅಳವಡಿಸಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದೆ.

ಹೌದು... 1999ರ ಜುಲೈ 26 ಕಾರ್ಗಿಲ್‌ನಲ್ಲಿ ಭಾರತದ ಸೈನಿಕರು, ಶತ್ರುಪಡೆಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ವಿಜಯವನ್ನು ಸಾಧಿಸಿದ ದಿನ. ಈ ದಿನವನ್ನು ಯಾವೊಬ್ಬ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಅಂದು ಹೋರಾಡಿದ ಸೈನಿಕರ ತ್ಯಾಗ, ಬಲಿದಾನ, ದೇಶಪ್ರೇಮ ಖಂಡಿತಾ ಎಲ್ಲಾ ಭಾರತೀಯರಿಗೂ ಸ್ಫೂರ್ತಿ, ದಾರಿದೀಪ. ಈ ವಿಜಯ ದ್ಯೋತಕಕ್ಕೆ ಇಂದಿಗೆ ರಜತ ವರ್ಷದ ಸಂಭ್ರಮ.

ಈ ಹಿನ್ನೆಲೆಯಲ್ಲಿ ಮನಪಾ ಕಾರ್ಗಿಲ್ ವಿಯಯ ದಿವಸವನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಿದೆ. ಮನಪಾ ಪ್ರವೇಶಿಸುತ್ತಿದ್ದಂತೆ ತಿರಂಗಾ ಬಟ್ಟೆಗಳ ಸ್ವಾಗತ ಕಮಾನು ಅಣಿಗೊಳಿಸಲಾಗಿದೆ. ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಕಾರ್ಗಿಲ್ ಯುದ್ಧ ಭೂಮಿಕೆಯ ಚಿತ್ರಣ, ಭಾರತದ ಸೈನಿಕರು ಕೆಚ್ಚೆದೆಯಿಂದ ಹೋರಾಡುತ್ತಿರುವ ದೃಶ್ಯ. ವಿಜಯ ಸಂಕೇತವಾಗಿ ಸೈನಿಕರಿಂದ ಕಾರ್ಗಿಲ್ ಯುದ್ಧಭೂಮಿಯಲ್ಲಿ ತಿರಂಗ ಹಾರಾಟದ ಚಿತ್ರಣ ಎದುರುಗೊಳ್ಳುತ್ತದೆ. ಮುಂದೆ ಹೋದಲ್ಲಿ ಕಚೇರಿಯ ಒಳಭಾಗದಲ್ಲೂ ಕಾರ್ಗಿಲ್ ಯುದ್ಧಭೂಮಿಯ ಚಿತ್ರಣ, ಎರಡೂ ಬದಿಯಲ್ಲಿ ಹುತಾತ್ಮರಾದ ಮಂಗಳೂರಿನ ಇಬ್ಬರು ಸೈನಿಕರಾದ ಕ್ಯಾ.ಪ್ರಾಂಜಲ್ ಹಾಗೂ ಎಫ್ಎಲ್‌ಟಿ ಎಲ್‌ಟಿ ರೊನಾಲ್ಡ್ ಕೆವಿನ್‌ ಸೆರಾವೊ ಅವರ ಬೃಹತ್ ಕಟೌಟ್ ಇಡಲಾಗಿದೆ. ಇದು ಸೈನಿಕರು ತಮ್ಮ ಜೀವವನ್ನು ಪಣವಾಗಿ ಇಟ್ಟು ದೇಶದ ಸುಭದ್ರತೆಗೆ ಹೋರಾಡಿದ ದ್ಯೋತಕವನ್ನು ನೆನಪಿಸುತ್ತದೆ. ಒಟ್ಟಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಮಂಗಳೂರು ಜನತೆಗೆ ಮನಪಾ ವಿಶಿಷ್ಟ ರೀತಿಯಲ್ಲಿ ನೆನಪಿಸುವಂತೆ ಮಾಡಿದೆ.

Edited By : Suman K
PublicNext

PublicNext

26/07/2024 12:48 pm

Cinque Terre

30.11 K

Cinque Terre

0