ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಲಿಂಡರ್ ಸ್ಫೋಟಕ್ಕೆ ಬೆಚ್ಚಿ ಬಿದ್ದ ಹುಳಿಮಾವು ಜನ.! - ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಭೀಕರ ಸಿಲಿಂಡರ್ ಸ್ಫೋಟವು ಹುಳಿಮಾವು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಏರಿಯಾ ಜನರಿಗೆ ಭೂಕಂಪ ಆಯಿತೇನೋ ಅನ್ನೋ ಅನುಭವ ಆಗಿದೆ.

ಸ್ಫೋಟದ ತೀವ್ರತೆಗೆ ಇನ್ನೂರು ಮೀಟರ್ ಸುತ್ತ ಮುತ್ತಲ ಮನೆ, ಅಂಗಡಿ ಕಿಟಕಿ ಗಾಜುಗಳು ಪೀಸ್ ಪೀಸ್ ಆಗಿವೆ. ಸ್ಫೋಟದ ಶಬ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಕೂಡ ಭಯಗೊಂಡಿದ್ದಾರೆ. ನಿನ್ನೆ ರಾತ್ರಿ 10.55ಕ್ಕೆ ಸ್ಟೀಲ್ ಪಾತ್ರೆಯ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ರಾಹುಲ್ ದಾಸ್ ಎಂಬಾತನಿಗೆ ಗಾಯವಾಗಿದೆ. ರಸ್ತೆಯಲ್ಲಿ ನಿಂತಿದ್ದ ಎರಡು ಸ್ಕೂಟರ್‌ಗಳು ಸಂಪೂರ್ಣ ಜಖಂಗೊಂಡಿವೆ. ಎದುರು ಮನೆಯಲ್ಲಿದ್ದ ಗೇಟ್ ಕೂಡ ಹಾನಿಯಾಗಿದೆ.

ಕೆಲಸ ಮುಗಿಸಿ ಶೆಟರ್ ಕ್ಲೋಸ್ ಮಾಡಿ ಹೋಗಿದ್ದರು. ಅಂಗಡಿ ಒಳಗೆ ಕೆಲಸಗಾರ ರಾಹುಲ್ ದಾಸ್ ಮಲಗಿದ್ದ. ಅದೇ ಅಂಗಡಿಯಲ್ಲಿ ಅಕ್ರಮವಾಗಿ ಸಿಲಿಂಡರ್ ರೀ ಫಿಲ್ಲಿಂಗ್ ಕೂಡ ಮಾಡಲಾಗುತ್ತಿಂತೆ. ಅಂಗಡಿಯೊಳಗೆ ಗ್ಯಾಸ್ ಲೀಕ್ ಆಗಿದೆ. ಅಂಗಡಿಯ ಮುಂಭಾಗ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡಲಾಗ್ತಿದ್ದು, ಚಾರ್ಜರ್ ತೆಗೆಯುವ ವೇಳೆ ಸ್ಪಾರ್ಕ್ ಆಗಿ ಸ್ಫೋಟವಾಗಿರೋ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಅಂಗಡಿ ಗೋಡೆ ಕುಸಿದು ಬಿದ್ದಿದ್ದು, ಸುತ್ತಮುತ್ತ ಇರುವ ಕಟ್ಟಡಗಳಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಳಿಮಾವು ಸುತ್ತಮುತ್ತ ತಲೆ ಎತ್ತಿರುವ ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಅಡ್ಡೆಗಳೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸ್ಫೋಟ ಸಂಭವಿಸಿದ ರಸ್ತೆಯಲ್ಲೇ 5ಕ್ಕೂ ಹೆಚ್ಚು ರೀ ಫಿಲ್ಲಿಂಗ್ ಅಡ್ಡೆಗಳಿದ್ದು ಸದ್ಯ ಎಲ್ಲಾ ಅಂಗಡಿಗಳನ್ನ ಪೊಲೀಸ್ರು ಪರಿಶೀಲನೆ ನಡೆಸ್ತಿದ್ದಾರಂತೆ.

Edited By : Shivu K
PublicNext

PublicNext

26/07/2024 10:46 am

Cinque Terre

35.75 K

Cinque Terre

0