ಬೆಂಗಳೂರು : ಖೋಖೋ ಪಂದ್ಯಾವಳಿಯಲ್ಲಿ ತೀರ್ಪುಗಾರರನ್ನ ಬೆದರಿಸಲು ಕಿಡಿಗೇಡಿಗಳು ವಿಕೆಟ್, ಡ್ರ್ಯಾಗರ್ ಸೇರಿದಂತೆ ಮಾರಕಾಸ್ತ್ರ ಹಿಡಿದು ಬಡಿದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಮಂಗಳವಾರ ಸಂಜೆ ಕೊತ್ತನೂರು ಠಾಣಾ ವ್ಯಾಪ್ತಿಯ ಬಿಳಿಶಿವಾಲೆ ಸಮೀಪದ ಸರ್ಕಾರಿ ಶಾಲಾ ಮೈದಾನದಲ್ಲಿ ಘಟನೆ ನಡೆದಿದ್ದು, ಕಿಡಿಗೇಡಿಗಳ ಕೃತ್ಯ ಸ್ಥಳೀಯರ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ.
ಶಾಲಾ ಮೈದಾನದಲ್ಲಿ ಖೋಖೋ ಪಂದ್ಯಾವಳಿ ವೀಕ್ಷಿಸಲು ಮತ್ತೊಂದು ಏರಿಯಾದ ಯುವಕರು ಬಂದಿದ್ದರು. ಆಟದ ವೇಳೆ ತೀರ್ಪುಗಾರರು ಸರಿಯಾಗಿ ತೀರ್ಪು ಕೊಡುತ್ತಿಲ್ಲವೆಂದು ರೊಚ್ಚಿಗೆದ್ದ ಯುವಕರು ವಿಕೆಟ್, ಡ್ರ್ಯಾಗರ್ ಹಿಡಿದು ಅಟ್ಟಾಡಿಸಿದ್ದಾರೆ. ಶಾಲಾ ಮಕ್ಕಳ ಮುಂದೆಯೇ ಕಿಡಿಗೇಡಿಗಳು ತೀರ್ಪುಗಾರರನ್ನ ಅಟ್ಟಾಡಿಸಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಸುಲೇಮಾನ್ ಎಂಬಾತನನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಹೇಳಿಕೆ ಪಡೆದಿರುವ ಕೊತ್ತನೂರು ಠಾಣಾ ಪೊಲೀಸರು ಸುದೀಪ್, ಪವನ್ ಸೇರಿದಂತೆ ಮತ್ತಿತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
24/07/2024 02:22 pm