ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಿಷತ್ ಚುನಾವಣೆಯಲ್ಲಿ ಜನಬಲ ಸೋತಿದೆ, ಹಣಬಲ ಗೆದ್ದಿದೆ: ಟಿ.ಎ ಶರವಣ

ಬೆಳಗಾವಿ: ಈ ಸಲದ ವಿಧಾನ ಪರಿಷತ್ ಚುನಾವಣೆಯಲ್ಲಿ ಜನಬಲಕ್ಕೆ ಸೋಲಾಗಿದೆ. ಹಾಗೂ ಹಣ ಬಲ ಗೆದ್ದಿದೆ. ಈ ಫಲಿತಾಂಶದಿಂದ ನಮ್ಮ ಪಕ್ಷ ಧೃತಿಗೆಟ್ಟಿಲ್ಲ ಎಂದು ಜೆಡಿಎಸ್ ಪಕ್ಷದ ವಕ್ತಾರ ಟಿ.ಎ ಶರವಣ ಹೇಳಿದ್ದಾರೆ.

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಶರವಣ ಅವರು ನಾವು ಜನರ ಮೇಲೆ ವಿಶ್ವಾಸ ಇಟ್ಟಿದ್ದೇವೆ. ಜನ ಅಂತಿಮವಾಗಿ ನಮ್ಮ ಕೈ ಹಿಡಿಯುತ್ತಾರೆ. ಆದರೆ ಪಕ್ಷಗಳ ಮೋಸದಾಟ ನಮಗೆ ಬೇಸರ ತರಿಸುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ಕೂಡ ತಮ್ಮ ಕುಟುಂಬಗಳಲ್ಲಿ ಟಿಕೆಟ್ ನೀಡಿದ್ದಾರೆ. ಹೀಗಾಗಿ ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಇವರಿಗೆ ಯಾವುದೇ ನೈತಿಕತೆ ಇಲ್ಲ. ಹಣ ಹಂಚಿ ಸೀಟು ಗೆಲ್ಲುವ ಪಕ್ಷಗಳಿಂದ ಏನೇನೂ ನಿರೀಕ್ಷಿಸಲಾಗದು. ಮುಂಬರುವ 2023ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವನ್ನು ಜನರು ಕೈಹಿಡಿದು ಮುನ್ನಡೆಸಲಿದ್ದಾರೆ ಎಂಬ ಭರವಸೆಯಿದೆ ಎಂದು ವಿಶ್ವಾಸದ ಮಾತನ್ನು ಆಡಿದರು.

Edited By : Nagaraj Tulugeri
PublicNext

PublicNext

16/12/2021 07:55 am

Cinque Terre

53.36 K

Cinque Terre

6

ಸಂಬಂಧಿತ ಸುದ್ದಿ