ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ.14 ವಿಶ್ವ ದೃಷ್ಟಿ ದಿನದ ಅಂಗವಾಗಿ ಲವ್ ಯುವರ್ ಐಸ್ ಕಾರ್ಯಕ್ರಮ

ಹುಬ್ಬಳ್ಳಿ: ಎಮ್.ಎಮ್.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಕಣ್ಣಿನ ಆರೋಗ್ಯದ ಮಹತ್ವವನ್ನು ಸಾರಲು ಪ್ರತಿವರ್ಷ ಅಕ್ಟೋಬರ್ ತಿಂಗಳ ಎರಡನೇ ಗುರುವಾರವನ್ನು ವಿಶ್ವ ದೃಷ್ಟಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 14 ರಂದು ವಿಶ್ವದೃಷ್ಟಿ ದಿನ ಅಥವಾ ವರ್ಲ್ಡ್ ಸೈಟ್ ಡೇಯನ್ನಾಗಿ ಆಚರಿಸಲಾಗುತ್ತಿದೆ ಎಂದು ಡಾ.ಕೃಷ್ಣ ಪ್ರಸಾದ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಇಂಟರ ನ್ಯಾಷನಲ್ ಸೈಟ್ ಫಸ್ಟ್ ವಿಶ್ವ ದೃಷ್ಟಿ ದಿನದ ಅಂಗವಾಗಿ ಅಂಧತ್ವ ಮತ್ತು ಕಡಿಮೆ ದೃಷ್ಟಿ ಸಾಮರ್ಥ್ಯದ ಸಮಸ್ಯೆಯ ಕುರಿತು ಜಾಗೃತಿ ಮೂಡಿಸಲು 2000 ರಲ್ಲಿ ಈ ಅಭಿಯಾನವನ್ನು ಪ್ರಾರಂಭ ಮಾಡಿದ್ದು, ಇದೀಗ ಈ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಹಕಾರದೊಂದಿಗೆ ಆಚರಿಸಲಾಗುತ್ತಿದೆ. ಅದರಂತೆ ಪ್ರತಿವರ್ಷ ಒಂದೊಂದು ವಿಷಯವನ್ನಿಟ್ಟುಕೊಂಡು ಆಚರಿಸಲಾಗುತ್ತಿದೆ. ಈ ಬಾರಿ ಲವ್ ಯೂವರ್ ಐಸ್ (ನಿಮ್ಮ ಕಣ್ಣುಗಳನ್ನು ಪ್ರೀತಿಸಿ) ಎಂಬುದಾಗಿದೆ ಎಂದರು.

ಸೇವ್ (ಸೆಲ್ಫ್ ಅಸೆಸ್ಮೆಂಟ್ ಆ ವಿಷನ್ ಬೈ ಎವೆರಿನ್) ಎನ್ನುವ ಚಾರ್ಟನ್ನು ಬಿಡುಗಡೆ ಮಾಡುವ ಮೂಲಕ ವಿಶ್ವದೃಷ್ಟಿ ದಿನವನ್ನು ಸಂಸ್ಥೆ ಆಚರಿಸಲು ಸನ್ನದ್ದವಾಗಿದೆ. ಸೇವ್ ಚಾರ್ಟ್ ಮೂಲಕ ಪ್ರತಿಯೊಬ್ಬರು ತಮ್ಮ ಮನೆಯಲ್ಲಿಯೇ ದೃಷ್ಟಿಯನ್ನು ಪರೀಕ್ಷಿಸುವ ವಿಧಾನವನ್ನು ತಿಳಿಸಿಕೊಡಲಾಗುವುದು. ಇದರಿಂದ ಬೇಗನ್ನೇ ದೃಷ್ಟಿ ತೊಂದರೆಯನ್ನು ನಿವಾರಿಸಲು ಅನುಕೂಲವಾಗಲಿದ್ದು, ಸುಮಾರು ಒಂದು ಲಕ್ಷ ಜನರಿಗೆ ಮುಂದಿನ ದೃಷ್ಟಿ ದಿನಾಚರಣೆ ಒಳಗೆ ತಲುಪಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಶ್ರೀನಿವಾಸ ಜೋಶಿ, ಡಾ.ಮನೋಹರ, ಸಂಜೀವ ಕುಲಕರ್ಣಿ ಇದ್ದರು.

Edited By : PublicNext Desk
Kshetra Samachara

Kshetra Samachara

13/10/2021 11:48 am

Cinque Terre

4.88 K

Cinque Terre

0

ಸಂಬಂಧಿತ ಸುದ್ದಿ