ಯಾದಗಿರಿ: ಮಹಿಳಾ ಆಯೋಗದ ಅಧ್ಯಕ್ಷರಿಂದ ಮಹಿಳೆಯರ ಕುಂದು ಕೊರತೆ ಸಭೆ
ಯಾದಗಿರಿ: ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಹಿಳೆಯರ ಸಮಸ್ಯೆಗಳನ್ನು ವಿಚಾರಿಸಿದರು ಮಹಿಳಾ ಸಿಬ್ಬಂದಿಗಳ ಸಮಸ್ಯೆಗಳನ್ನು ಕೇಳಿ ಸ್ಥಳದಲ್ಲಿದ್ದ ಪೋಲಿಸರಿಗೆ ಹಾಗೂ ಆರೋಗ್ಯಾಧಿಕಾರಿಗಳಿಗೆ ಮಹಿಳಾ ಸಿಬ್ಬಂದಿಗಳಿಗೆ ಸೂಕ್ತ ಸುರಕ್ಷತೆ ಹಾಗೂ ಸೇವಾ ಸೌಲಭ್ಯ ನೀಡಬೇಕೆಂದು ಆದೇಶಿಸಿದರು.
ಕೆಂಭಾವಿ ಆಸ್ಪತ್ರೆ 36 ಕ್ಕೂ ಅಧಿಕ ಗ್ರಾಮೀಣ ಭಾಗದವರಿಗೆ ಸೌಲಭ್ಯ ನೀಡುತ್ತದೆ. ಆದ್ರೆ ಮಹಿಳೆಯರಿಗೆ ಲೇಪ್ರೋಸ್ಕೋಪಿಕ್ ಮಾಡಬೇಕಾದ ಸೌಲಭ್ಯ ನೀಡುತ್ತಿಲ್ಲ ಯಾಕೆ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಇನ್ನೂ ಆರೋಗ್ಯ ಶಿಬಿರ ಗದ್ದಲ್ಲದಿಂದ ಕೂಡಿದ್ದು ಅಧಿಕಾರಿಗಳ ಎಡವಟ್ಟಿನಿಂದ ಸಮಸ್ಯೆ ಹೇಳಿಕೊಂಡು ಬಂದವರಿಗೆ ನಿರಾಸೆ ಉಂಟಾದ ಪ್ರಸಂಗವೂ ನಡೆಯಿತು. ಆಸ್ಪತ್ರೆಯ ಆವರಣ ಮಹಿಳಾ ಆಯೋಗದ ಅಧ್ಯಕ್ಷರು ಮಹಿಳೆಯರ ಸಮಸ್ಯೆ ಅರಿಯಲು ಬಂದರೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕಾರ್ಯಕ್ರಮದ ಚಿತ್ರಣವೇ ಬದಲಾಗಿ ಸದ್ದು ಗದ್ದಲ್ಲದಲ್ಲಿ ಮುಗಿಸಿ ಹೊರಟಿದ್ದು ಎಡವಟ್ಟಿಗೆ ಕಾರಣವಾಯಿತು.
Kshetra Samachara
23/10/2024 01:22 pm