ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ :ಗೃಹ ಸಚಿವ ಶಾ ರಾಜೀನಾಮೆಗೆ ಒತ್ತಾಯಿಸಿ ಕೆಂಭಾವಿ ಬಂದ್

ಯಾದಗಿರಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚಿಗೆ ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಅಂಬೇಡ್ಕರ್ ಅವರ ಹೆಸರು ಬಳಸುವುದು ಫ್ಯಾಷನ್ ಆಗಿದೆ, ಅವರ ಹೆಸರು ಹೇಳವ ಬದಲು ದೇವರ ನಾಮ ಸ್ಮರಣೆ ಮಾಡಿದ್ದರೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳುವ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ಖಂಡನೀಯ, ಕೂಡಲೇ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕೆಂದು ವಿವಿಧ ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ್ ಕೆಂಭಾವಿ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಅವರು ಈ ದೇಶದ ಅಸ್ಮಿತೆಯಾಗಿದ್ದಾರೆ, ನಾವೂ ಬಾಬಾ ಸಾಹೇಬ ಅವರನ್ನು ಆರಾದಿಸುತ್ತೇವೆ. ದೇಶದ ಇತಿಹಾಸದಲ್ಲಿ ಅಂಬೇಡ್ಕರ್ ಅವರ ಹೆಸರು ಚಿರಸ್ತಾಯಿಯಾಗಿದೆ. ಪ್ರಜಾಪ್ರಭುತ್ವಕ್ಕೆ ಅಡಿಪಾಯವಾದ ಸಂವಿಧಾನವೆಂಬ ಶ್ರೇಷ್ಠ ಗ್ರಂಥ ನೀಡಿದ ಮಹಾನ್ ವ್ಯಕ್ತಿಯ ವಿರುದ್ಧ ಈ ರೀತಿಯಾದ ಹೇಳಿಕೆ ನೀಡಲು ಬಂಡ ಧೈರ್ಯ ತೋರಿರುವ ಅಮಿತ್ ಶಾ ರವರು ಕೂಡಲೇ ದೇಶದ ಜನರ ಮುಂದೆ ಕ್ಷಮೆ ಕೇಳಬೇಕು ಮತ್ತು ರಾಜೀನಾಮೆ ಕೊಟ್ಟು ಸಂಪುಟದಿಂದ ಹೊರ ಹೋಗಬೇಕು ಎಂದು ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು.

Edited By : Shivu K
PublicNext

PublicNext

24/12/2024 05:08 pm

Cinque Terre

26.64 K

Cinque Terre

0