ಯಾದಗಿರಿ : ರೈತರ ಜಮೀನಿನ ಮೇಲೆ ವಕ್ಫ್ ಕಬಳಿಕೆ ಹುನ್ನಾರ ವಿಚಾರ ಯಾದಗಿರಿಯಲ್ಲಿ ಶಾಸಕ ಶರಣಗೌಡ ಕಂದಕೂರ ಹೇಳಿಕೆ ವಿಜಯಪುರ ರೈತರ ಜಮೀನಿನ ಪಹಣಿಯಲ್ಲಿ ವಕ್ಪ್ ಆಸ್ತಿ ಅಂತ ಬರ್ತಾಯಿದೆ ಆ ರೈತರಿಗೆ ಯಾರು ಪರಿಹಾರ ಕೊಡಬೇಕು? ಕಷ್ಟಕ್ಕೆ ಸ್ಪಂದನೆ ಮಾಡಬೇಕು ವಕ್ಫ್ ಆಸ್ತಿ ಅಂತ ಯಾಕೆ ಬಂತು ಈ ಬಗ್ಗೆ ತನಿಖೆ ಆಗಬೇಕು. ಒಬ್ಬ ಮಂತ್ರಿ ಬಂದು ಮಾಡ್ಯಾರ ಅನ್ನೋಕ್ಕಿಂತ ಅಲ್ಲಿ ವ್ಯವಸ್ಥೆ ಹೇಗಿದೆ ನೋಡಬೇಕು ಅಧಿಕಾರಿಗಳ ಲೋಪವಾ..? ತಾಂತ್ರಿಕ ದೋಷನಾ..? ಪ್ರಭಾವಿಗಳ ಕೈವಾಡವಾ..? ವಿಚಾರಿಸಬೇಕು ವಕ್ಪ್ ಆಸ್ತಿ ಸಾವಿರಾರು ಎಕರೆ ಇದೆ ಅಂತ ಸರ್ಕಾರ ಹೇಳುತ್ತದೆ ವಕ್ಪ್ ದವರು ಇದ್ದ ಉಳಿಸಿಕೊಳ್ಳುವ ಕೆಲಸ ಮಾಡ್ತಾಯಿಲ್ಲ. ರೈತರ ಭೂಮಿ ವಕ್ಪ್ ಅಂತ ಸೇರಿಸುವ ಕೆಲಸ ಮಾಡ್ತಾಯಿದ್ದಾರೆ ತುಷ್ಠಿಕರಣ ನೀತಿಯನ್ನ ರಾಜ್ಯ ಸರ್ಕಾರ ಮಾಡ್ತಾಯಿದೆ ರಾಜ್ಯದಲ್ಲಿ ಯಾವುದೇ ರೈತರಿಗೆ ಅನ್ಯಾಯವಾದ್ರೂ ನಾವು ಅವರ ಪರ ದ್ವನಿ ಎತ್ತುತ್ತೇವೆ. ಸದನದ ಹೊರಗೆ, ಒಳಗೆ ಹೋರಾಟ ಮಾಡ್ತೀವಿ ಯಾದಗಿರಿಯಲ್ಲೇ ವಕ್ಪ್ ಆಸ್ತಿಯನ್ನ ಪ್ರಭಾವಿಗಳು ಲೂಟಿ ಮಾಡಿದ್ದಾರೆ.ಮೊದಲು ಆ ಆಸ್ತಿಯನ್ನ ವಕ್ಫ್‌ನವರು ಉಳಿಸಿಕೊಳ್ಳಲಿ. ಯಾದಗಿರಿ ಜಿಲ್ಲಾಡಳಿತ ಭವನದ ಸುತ್ತಲಿನ ವಕ್ಪ್ ಆಸ್ತಿಯನ್ನೇ ಕಬಳಿಕೆ ಮಾಡಿದ್ದಾರೆ ಆ ಎಲ್ಲ ಕಾಗದ ಪತ್ರ ನಾನು ತೆಗೆಸುತ್ತಿದ್ದೇನೆ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ನಾನು ದ್ವನಿ ಎತ್ತುತ್ತೇನೆ ಎಂದರು.
PublicNext
27/10/2024 07:03 pm