ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ನಿಖಿಲ್‌ ಕುಮಾರಸ್ವಾಮಿಗೆ ಚನ್ನ'ಪಟ್ಟ'ಣ ಗ್ಯಾರಂಟಿ- ಶಾಸಕ ಶರಣಗೌಡ ಖಚಿತ ನುಡಿ

ಯಾದಗಿರಿ: ಶಿವರಾಮೇಗೌಡರು ಸಿಪಿವೈ ಅವರನ್ನು ಸೋಲಿಸಲು ವ್ಯವಸ್ಥಿತವಾದ ಸಂಚು ರೂಪಿಸುತ್ತಿದ್ದಾರೆ ಎಂದು ಯಾದಗಿರಿಯಲ್ಲಿ‌ ಗುರಮಿಠಕಲ್ ಶಾಸಕ ಶರಣಗೌಡ ಕಂದಕೂರ ವಾಗ್ದಾಳಿ ನಡೆಸಿದ್ದಾರೆ.

ವಿವೇಕಹೀನರಾಗಿ ಬೈಯೋದು ಅವರ ಬಾಯಿ ಚಟ. ಶಿವರಾಮೇಗೌಡರು ಕೃತಜ್ಞತೆ ಇಲ್ಲದ ವ್ಯಕ್ತಿ. ಈ ಹಿಂದೆ ಸೋತು ಸುಣ್ಣವಾದ ಶಿವರಾಮೇಗೌಡರನ್ನು ದೇವೇಗೌಡರ ಕುಟುಂಬವೇ ಸಂಸತ್ತಿಗೆ ಕಳಿಸಿತ್ತು. ಆ ಋಣ ಅವರಿಗೆ ಇಲ್ಲ ಎಂದು ಕಂದಕೂರ ಕಿಡಿ ಕಾರಿದರು.

ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಯವರ ಗೆಲುವು ಶತಸಿದ್ಧ. ಈ ಹಿಂದೆ ಶಿವರಾಮೇಗೌಡರು ಸುಮಲತಾ ಅವರಿಗೆ ಅವಹೇಳನ ಮಾಡಿದ್ದಕ್ಕೆ ನಿಖಿಲ್ ಸೋಲಾಯ್ತು. ಶಿವರಾಮೇಗೌಡ ಕಾಂಗ್ರೆಸ್ ಗೆ ಬಂದು ಈಗ ಸಿಪಿವೈ ಅವರನ್ನು ಸೋಲಿಸಲು ವ್ಯವಸ್ಥಿತವಾದ ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಿದರು.

Edited By : Manjunath H D
PublicNext

PublicNext

27/10/2024 07:50 pm

Cinque Terre

32.02 K

Cinque Terre

0