ಯಾದಗಿರಿ: ವಿದ್ಯುತ್ ಸ್ಪರ್ಶಿಸಿ 9 ಕುರಿಗಳು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ನಡೆದಿದೆ. ಕುರಿಗಾಹಿ ಅಯ್ಯಪ್ಪ ಕೆಂಗೂರಿ ಅವರಿಗೆ ಸೇರಿದ ಒಂಭತ್ತು ಕುರಿಗಳು ಮೃತಪಟ್ಟಿದ್ದು, ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಇನ್ನು ಎಂದಿನಂತೆ ಜಮೀನಿನಲ್ಲಿ ಕುರಿಗಳು ಮೆಯುತ್ತಿದ್ದು, ಮಳೆ-ಗಾಳಿಗೆ ವಿದ್ಯುತ್ ತಂತಿ ಹರಿದು ಹೊಲದಲ್ಲಿದ್ದ ಸೋಲಾರ್ ಮೇಲೆ ಬಿದ್ದಿದೆ. ಸೋಲಾರ್ ಬಳಿ ಮೆಯುತ್ತಿದ್ದ 9 ಕುರಿಗಳಿಗೆ ವಿದ್ಯುತ್ ತಗುಲಿ ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಈ ಘಟನೆ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
02/10/2022 03:48 pm