ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಆದ್ರೆ ಎಲ್ಲ ವಿಡಿಯೋಗಳು ಗಮನ ಸೆಳೆಯುವುದಿಲ್ಲ.
ಸದ್ಯ ವೈರಲ್ ಆದ ಈ ವಿಡಿಯೋ ಮಾತ್ರ ಪ್ರತಿಯೊಬ್ಬರ ಗಮನ ಸೆಳೆದಿದೆ. ವಿಡಿಯೋ ಕಂಡ ನೆಟ್ಟಿಗರು ದಂಗಾಗಿದ್ದಾರೆ. ಹೌದು
ವ್ಯಕ್ತಿಯೊಬ್ಬ ಎತ್ತುವೊಂದನ್ನು ಬೈಕ್ ನಲ್ಲಿ ಹಗ್ಗದಿಂದ ಕಟ್ಟಿ ಹಿಂಬದಿಯ ಸೀಟಿನಲ್ಲಿ ಕೂರಿಸಿದ್ದಾನೆ. ಜೊತೆಗೆ ಫುಲ್ ಸ್ಪೀಡ್ನಲ್ಲಿ ಬೈಕ್ ಓಡಿಸುತ್ತಿದ್ದಾನೆ. ಎತ್ತು ಕೂಡ ಆರಾಮವಾಗಿ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇಂಟರ್ನೆಟ್ ಅದ್ಭುತ ಮತ್ತು ತಮಾಷೆ ವಿಡಿಯೋಗಳ ಉಗ್ರಾಣವಾಗಿದೆ. ಪ್ರತಿದಿನ ಒಂದಿಲ್ಲ ಒಂದು ಹೊಸ ವಿಡಿಯೋಗಳು ಕಾಣಸಿಗುತ್ತವೆ. ಇವು ನಮಗೆ ಮನರಂಜನೆ ಸಹ ನೀಡುತ್ತವೆ. ಅಂತಹುದೇ ಒಂದು ವಿಡಿಯೋ ಇದಾಗಿದೆ.ಬೈಕ್ ಚಾಲಕ ಎಷ್ಟು ಅದ್ಭುತವಾಗಿ ಸಮತೋಲನ ಕಾಯ್ದುಕೊಂಡಿದ್ದಾನೆ ಎಂದು ನೋಡಿದರೆ ಸಾಕಷ್ಟು ಆಶ್ಚರ್ಯವಾಗುತ್ತದೆ.
ಈ ವಿಲಕ್ಷಣ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ವಿಡಿಯೋವನ್ನು ಅನಿಮಲ್ಸ್ಇಂಥೆನೇಚರ್ ಟುಡೇ ಹೆಸರಿನ ಇನ್ ಸ್ಟಾಗ್ರಾಮ್ ಖಾತೆಯಿಂದ ಅಪ್ ಲೋಡ್ ಮಾಡಲಾಗಿದೆ.
PublicNext
13/09/2022 10:33 pm