ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆನ್ನಟ್ಟಿ ಬಂದ ಗಜರಾಜ : ಸಫಾರಿಗೆ ಹೋದವರು ಗ್ರೇಟ್ ಎಸ್ಕೇಪ್ ವಿಡಿಯೋ ವೈರಲ್

ಚಾಮರಾಜನಗರ : ಕಾಡು ಕಂಡಲ್ಲಿ ಸಫಾರಿಗೆ ಹೋಗುವುದು ಸಾಮಾನ್ಯ ಅದೇ ರೀತಿ ಜಿಲ್ಲೆಯ ಬಂಡೀಪುರ ಅರಣ್ಯದಲ್ಲಿ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಕಾಡಾನೆಯೊಂದು ಶಾಕ್ ಕೊಟ್ಟಿದೆ. ಹೌದು ಸಫಾರಿ ವಾಹನವನ್ನು ಆನೆ ಬೆನ್ನಟ್ಟಿ ಬರುತ್ತಿದ್ದಂತೆ ವಾಹನವನ್ನು ಚಾಲಕ ರಿವರ್ಸ್ ಓಡಿಸಿದ್ದಾನೆ. ರಿವರ್ಸ್ ಓಡಿಸಿದ್ರೂ ಬಿಡದೇ ಗಜರಾಜ ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದಿದೆ. ಬಳಿಕ ಕಾಡಿನತ್ತ ಮುಖಮಾಡ್ತಿದ್ದಂತೆ ಸಫಾರಿಗೆ ತೆರಳಿದ್ದವರು ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು, ರಾಮನಗರದಲ್ಲಿ ತಾಯಿ ಇಲ್ಲದ ಒಂದು ತಿಂಗಳ ಆನೆಮರಿಯೊಂದು ದಾರಿತಪ್ಪಿ ಕಾಡಿನಿಂದ ನಾಡಿಗೆ ಬಂದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಭೂಹಳ್ಳಿ ಸಮೀಪದ ಕಾವೇರಿ ವನ್ಯಜೀವಿಧಾಮದ ಕುದುರೆದಾರಿಯಲ್ಲಿ ತಾಯಿ ಆನೆ ಕಂದಕಕ್ಕೆ ಉರುಳಿ ಮೃತಪಟ್ಟಿದೆ. ಈ ವೇಳೆ ಒಂದು ತಿಂಗಳ ಆನೆ ಮರಿ ಎರಡ್ಮೂರು ದಿನಗಳ ಕಾಲ ಮಳೆ, ಚಳಿಯಲ್ಲಿಯೇ ಅಮ್ಮನಿಗಾಗಿ ಕಣ್ಣಿರಿಟ್ಟಿದೆ. ಬಳಿಕ ನಿತ್ರಾಣಗೊಂಡ ಮರಿ ಆನೆ, ಕಾಡಿಗೆ ಮೇಯಲು ಹೋಗಿದ್ದ ನಾಟಿಹಸುಗಳ ಜತೆ ಸೋಲಿಗೆರೆ ಗ್ರಾಮಕ್ಕೆ ಬಂದಿದೆ. ಸದ್ಯ ಅರಣ್ಯ ಇಲಾಖೆ ಜತೆಗೂಡಿ ಮೂರು ದಿನಗಳಿಂದ ಮರಿ ಆನೆಗೆ ಆರೈಕೆ ಮಾಡಲಾಗುತ್ತಿದೆ.

Edited By : Nirmala Aralikatti
PublicNext

PublicNext

09/09/2022 01:54 pm

Cinque Terre

46.43 K

Cinque Terre

2

ಸಂಬಂಧಿತ ಸುದ್ದಿ