ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಮ್ನೆ ಹೋಗ್ತಿದ್ದ ನಾಯಿಗೆ ಕಲ್ಲೆಸೆದ ಮುಂದೆನಾಯ್ತು..ಗೊತ್ತಾ! ವಿಡಿಯೋ ವೈರಲ್

ಇದನ್ನೇ ಕರ್ಮ ಅಂತಾರೆ. ತಪ್ಪು ಮಾಡಿದವರು ಖಂಡಿತ ಶಿಕ್ಷೆ ಅನುಭವಿಸ್ತಾರೆ.. ನಾವು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಅನೇಕ ವೀಡಿಯೊಗಳನ್ನು ನೋಡಿದ್ದೇವೆ. ಅಂತಹದ್ದೇ ಘಟನೆಗೆ ಈ ವಿಡಿಯೋವೊಂದು ಸಾಕ್ಷಿಯಾಗಿದೆ.

ಇದರಲ್ಲಿ ಒಬ್ಬ ವ್ಯಕ್ತಿ ರಸ್ತೆಯಲ್ಲಿ ಅದರ ಪಾಡಿಗೆ ಅದು ನಡೆದು ಹೋಗುತ್ತಿದ್ದ ನಾಯಿಯ ಮೇಲೆ ತನ್ನ ಪೌರುಷ ತೋರಲು ಹೋಗಿದ್ದಾನೆ. ಅಷ್ಟೇ ಆ ನಾಯಿ ನೀನಾ ನಾನಾ ಎಂದು ಅವನ ಮೇಲೆ ಎಗರಿದೆ. ವೀರತ್ವ ತೋರಿಸಲು ಕಲ್ಲಿನಿಂದ ಹೊಡೆಯ ಬಂದ ವ್ಯಕ್ತಿಗೆ ಜೋರಾಗಿಯೇ ಬುದ್ದಿ ಕಲಿಸಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ ಅವನ ಕರ್ಮವು ಕಲ್ಲು ಒಗೆದ ಶರವೇಗದಲ್ಲೇ ಹಿಂತಿರುಗಿ ಬಂದಿದೆ. ನಾಯಿ ಆತನ ಮೇಲೆ ದಾಳಿ ಮಾಡಿದೆ. ಕಚ್ಚಿ ಕಚ್ಚಿ ಆ ವ್ಯಕ್ತಿಗೆ ಪಾಠ ಕಲಿಸಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ಆ ವ್ಯಕ್ತಿಗೆ ನಾಯಿ ಪಾಠ ಕಲಿಸಿದ್ದಾರೆ.

Edited By : Abhishek Kamoji
PublicNext

PublicNext

24/08/2022 04:16 pm

Cinque Terre

33.73 K

Cinque Terre

2

ಸಂಬಂಧಿತ ಸುದ್ದಿ