ಇತ್ತೀಚೆಗೆ ಶೇಂಗಾ ವ್ಯಾಪಾರಿಯೊಬ್ಬರು ಹಾಡು ಹಾಡುತ್ತಾ ಸಾಕಷ್ಟು ವೈರಲ್ ಆಗಿದ್ರು ಅದುವೇ ಕಚ್ಚಾ ಬಾದಾಮ್ ಹಾಡು ಇದು ಎಷ್ಟರ ಮಟ್ಟಿಗೆ ಜನಮನ ತಟ್ಟಿದೆ ಎಂದರೆ ಎಲ್ಲಿ ನೋಡಿದ್ರು ಇದೇ ಹಾಡಿನ ಸದ್ದು.
ಸದ್ಯ ದ್ರಾಕ್ಷಿ ಮಾರಾಟ ಮಾಡುವ ಅಜ್ಜ ಒಬ್ಬರು ವೈರಲ್ ಆಗಿದ್ದಾರೆ.
ಎದುರಿಗೆ ದ್ರಾಕ್ಷಿ ಮತ್ತು ತಕ್ಕಡಿ ಇಟ್ಟುಕೊಂಡು ತಮ್ಮದೇ ರೀತಿಯಲ್ಲಿ ಜಿಂಗಲ್ ಹಾಡು ಹೇಳುತ್ತಿರುವ ಅಜ್ಜನ ವಿಡಿಯೋವನ್ನು ಸಾಲಿಮಿನಾಯತ್ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. “ಕಚ್ಚಾ ಬಾದಾಮ್ ಆಯ್ತು ಈಗ ಜಿಂಗಲ್’ ಎಂದು ಜನ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.
PublicNext
30/03/2022 11:11 am