ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಕಿಕ್ ಹೊಡೆದ ವಿದ್ಯಾರ್ಥಿನಿ : ವಿಡಿಯೋ ವೈರಲ್

ಬೈಕ್ ಬಹುತೇಕರ ನೆಚ್ಚಿನ ಸಂಚಾರಿ ಸಂಗಾತಿ. ಆದರೆ, ಈ ಬೈಕ್ ಸವಾರಿಯ ವೇಳೆ ಕೆಲವು ತಮಾಷೆಯ ಕ್ಷಣಗಳು ನಡೆದು ಬಿಡುತ್ತವೆ.

ಸದ್ಯ ವೈರಲ್ ಆದ ವಿಡಿಯೋ ಕೂಡಾ ಅಂತಹದ್ದೇ. ಈ ವಿಡಿಯೋ ನೋಡಿ ನೀವು ನಗದೇ ಇರಲು ಸಾಧ್ಯವಿಲ್ಲ.

comedynation.teb ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ಅಪ್ಲೋಡ್ ಆದ ಈ ವಿಡಿಯೋದಲ್ಲಿ ಯುವತಿಯೊಬ್ಬರು ಉತ್ಸಾಹದಿಂದ ಬೈಕ್ ಚಲಾಯಿಸಲು ಹೋಗಿ ಕಿಕ್ ಮಾಡುತ್ತಾರೆ. ಎಷ್ಟೇ ಬಲವಾಗಿ ಕಿಕ್ ಮಾಡಿದರೂ ಬೈಕ್ ಸ್ಟಾರ್ಟ್ ಆಗುವುದೇ ಇಲ್ಲ. ಹಾಗಂತ, ಯುವತಿ ತನ್ನ ಪ್ರಯತ್ನವನ್ನು ಬಿಡುವುದಿಲ್ಲ. ಕೊನೆಗೆ ಕಿಕ್ ಮುರಿದು ಬೀಳುತ್ತದೆ.

ಇದನ್ನು ಕಂಡ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ.

Edited By : Manjunath H D
PublicNext

PublicNext

23/03/2022 08:03 pm

Cinque Terre

34.15 K

Cinque Terre

0

ಸಂಬಂಧಿತ ಸುದ್ದಿ