ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಕಾಮಿಡಿ ವಿಡಿಯೋಗಳಾದರೆ ಇನ್ನು ಕೆಲವು ವಿಡಿಯೋಗಳು ಸದ್ಯದ ಸ್ಥಿತಿ ಬಗ್ಗೆ ಹೇಳುತ್ತವೆ.
ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ ಬೆಂಕಿ ಹಚ್ಚಿದ ಹಳಿ ಮೇಲೆ ರೈಲು ಚಲಿಸುವ ದೃಶ್ಯ ಕಂಡು ಬಂದದ್ದು ಯುಎಸ್ ನ ಚಿಕಾಗೋದಲ್ಲಿ
ಹಾಗಂತ, ಇದೇನೂ ಗಲಾಟೆಯ ದೃಶ್ಯ ಅಲ್ಲ, ಸ್ಟಂಟ್ ಕೂಡಾ ಅಲ್ಲ. ಹವಾಮಾನ ವೈಪರೀತ್ಯದ ಕಾರಣದಿಂದ ಸುಗಮ ಸೇವೆಗಾಗಿ ಈ ರೀತಿ ಸುರಕ್ಷಿತವಾಗಿ ಬೆಂಕಿ ಹಾಕಲಾಗಿದೆ...!
ಪ್ರಯಾಣಿಕ ರೈಲು ವ್ಯವಸ್ಥೆಯಾದ ಮೆಟ್ರಾ ಚಿಕಾಗೋದಲ್ಲಿ ತೀವ್ರವಾದ ಶೀತ ಮತ್ತು ಚಳಿಗಾಲದ ಹವಾಮಾನ ಹಾಗೂ ಹಿಮಪಾತದ ಕಾರಣದಿಂದ ಸುಗಮ ಸೇವೆಗೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
PublicNext
30/01/2022 05:35 pm