ಮದುವೆ ಅಂದ್ರೆ ಖುಷಿ. ಮದುವೆ ಅಂದ್ರೆ ಹೊಸ ಪಯಣದ ಕ್ಷಣಗಣನೆ. ಮದುವೆ ಅಂದ್ರೆ ಈಗ ನೃತ್ಯ ಮತ್ತು ನೃತ್ಯ. ನಿಜ, ಮದುವೆ ಅನ್ನೋ ಪರಿಕಲ್ಪನೆ ಬದಲಾಗುತ್ತಿದೆ. ಸಿನಿಮಾ ರೀತಿಯಲ್ಲಿಯೇ ಎಲ್ಲ ಹುಡ್ಗರು,ಹುಡ್ಗಿಯರು ಮದುವೆ ಆಗೋಕೆ ಇಷ್ಟ ಪಡುತ್ತಾರೆ. ಅಲ್ಲಿ ಸಿನಿಮಾ ಹಾಡುಗಳು ಇರಬೇಕು. ವರನೂ ಕುಣಿಯಬೇಕು,ವಧುನ ಕುಣಿಯ ಬೇಕು. ಇದು ಈಗೀನ ಮದುವೆ.ಆದರೆ, ಈ ಖುಷಿಯ ಸಂದರ್ಭದಲ್ಲಿ ವಧುವಿನ ನೃತ್ಯವನ್ನಕಂಡು ಭಾವುಕನಾಗಿ ಕಣ್ಣೀರು ಹಾಕಿದ್ದಾನೆ ಇಲ್ಲೊಬ್ಬ
ವರಮಹಾಶಯ.
ವೈರಲ್ ವೀಡಿಯೋ ಅಂದ್ರೆ ನಿಮ್ಗೆ ಅಲ್ಲಿ ವೀಡಿಯೋ ಬಿಟ್ಟು ಬೇರೆ ಮಾಹಿತಿ ಸಿಗೋದಿಲ್ಲ. ಹಾಗೆ ವೀಡಿಯೋಗಳೇ ಎಲ್ಲವನ್ನೂ ಹೇಳಿ ಬಿಡುತ್ತವೆ.ಹಾಗೇನೆ ಮದುವೆಯ ಸಂಭ್ರಮದಲ್ಲಿ ಇಲ್ಲೊಬ್ಬ ವರ ಕುಣಿದು ಖುಷಿಪಡೋ ಬದಲು, ಭಾವುಕನಾಗಿ ಕಣ್ಣೀರು ವರೆಸುತ್ತಾ ಕುಳಿತಿದ್ದಾನೆ. ಇವು ಕಣ್ಣೀರಾ ಇಲ್ಲ ಆನಂದ ಭಾಷ್ಪವೊ ಗೊತ್ತಿಲ್ಲ. ತನ್ನ ಮದುವೆ ಆದ ಹುಡುಗ ಅಳುತ್ತಿದ್ದಾನ ಅಂತಲೇ ಹುಡ್ಗಿ ಅವನ ಬಳಿ ಬಂದು ಕೈಹಿಡಿತಾಳೆ. ವೇದಿಕೆಗೂ ಕರೆದುಕೊಂಡು ಹೋಗ್ತಾಳೆ. ಅಷ್ಟೇ, ಇದರ ಹೊರತು ಕಣ್ಣೀರಿಗೆ ಕಾರಣ ಏನು ಅನ್ನೋದು ತಿಳಿಯುದಿಲ್ಲ.ಹುಡುಗ ಕಣ್ಣೀರು ಹಾಕಿರೋದಕ್ಕೋ ಏನೋ. ಪುಟ್ಟ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
PublicNext
17/10/2021 07:11 pm