ದೈತ್ಯ ಆನೆ ಮುಂದೆ ನಿಲ್ಲೋಕೆ ಭಯ ಬರುತ್ತೆ. ಒಂದು ವೇಳೆ ಗಜ ಕೋಪದಲ್ಲಿ ದಾಳಿ ನಡೆಸಿದ್ರೆ ಏನ್ ಆಗಬಹುದು. ಇದನ್ನು ಕಲ್ಪನೆ ಮಾಡಿಕೊಳ್ಳಲು ಭಯ ಬರುತ್ತದೆ. ಅಂತಹ ದಾಳಿಯಿಂದ ಪಾರಾದವರ ಪರಿಸ್ಥಿತಿ ಹೇಗಿರಬೇಡ ಹೇಳಿ...
ಹೌದು. ದೈತ್ಯ ಆನೆಯೊಂದು ತನ್ನ ಪ್ರದೇಶಕ್ಕೆ ಬಂದ ಜನರಿಗೆ ಎಚ್ಚರಿಕೆ ಕೊಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯ ಎಲ್ಲಿನದ್ದು ಎಂದು ಸ್ಪಷ್ಟವಾಗಿಲ್ಲ. ಆದರೆ ಕಮೆಂಟ್ ಸೆಕ್ಷನ್‌ನಲ್ಲಿ ಇದು ಅಸ್ಸಾಂನಲ್ಲಿ ಸೆರೆಯಾದ ದೃಶ್ಯ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.
ಅರಣ್ಯದ ಮಣ್ಣು ರಸ್ತೆ ಮಾರ್ಗವಾಗಿ ವಾಹನ ಸಾಗುತ್ತಿತ್ತು. ಈ ವೇಳೆ ಏಕಾಏಕಿ ಕಾಣಿಸಿಕೊಂಡ ಆನೆ ವಾಹನದತ್ತ ನುಗ್ಗಿದೆ. ಮೈಯೆಲ್ಲಾ ಧೂಳು ಹಾಕಿಕೊಂಡಿದ್ದ ಈ ಆನೆ ವಾಹನದ ಪಕ್ಕ ಓಡೋಡಿ ಬಂದು ಧೂಳನ್ನು ಚಿಮ್ಮಿಸಿದೆ. ಈ ಧೂಳು ಚಿಮ್ಮಿಸುವ ದೃಶ್ಯವನ್ನು ಕಂಡಾಗಲೇ ಎದೆ ಧಗ್ ಎನ್ನುತ್ತದೆ. ಹೀಗೆ ಒಂದು ಸಲ ಎಚ್ಚರಿಕೆ ಕೊಟ್ಟಿದೆ. ಆನೆಯ ಅಬ್ಬರದಿಂದ ಹೆದರಿದ ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪರಿಣಾಮ ಆನೆ ಏನೂ ಮಾಡದೆ ಮರಳಿದ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
PublicNext
27/02/2021 06:00 pm