ಬೀದಿ ದನದ ಅಂದ್ರೆ ಭಯ ಇರಬೇಕು... ತಂಟೆಗೆ ಹೋದ್ರೂ ಗುಮ್ಮುತ್ತವೆ, ಹೋಗದಿದ್ರೂ ಗುಮ್ಮತ್ತವೆ. ಅದಕ್ಕೆ ನಿದರ್ಶನ ಎಂಬಂತೆ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಇಂತಹದ್ದೇ ಘಟನೆಯೊಂದು ಕೊಲಂಬಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಬೀದಿ ದನದ ದಾಳಿಗೆ ರೋಗಿಗಳು ಕಕ್ಕಾಬಿಕ್ಕಿಯಾದ್ರೆ, ಪೀಠೋಪಕರಣಗಳು ಧ್ವಂಸಗೊಂಡಿವೆ...
ಈ ಘಟನೆಯು ಸ್ಯಾನ್ ಲೂಯಿಸ್ ಪುರಸಭೆಯ ಸ್ಯಾನ್ ರಾಫೆಲ್‌ನಲ್ಲಿರುವ ಕೊಲಂಬಿಯಾ ಆಸ್ಪತ್ರೆಯ ಆಂಟಿಯೋಕ್ವಿಯಾ ವಿಭಾಗದಲ್ಲಿ ನಡೆದಿದೆ. ಬೀದಿ ದನ ದಾಳಿಯ ದೃಶ್ಯವು ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
PublicNext
18/02/2021 07:26 pm