ನಾಯಿಯ ನಡೆ ನಿಗೂಢ ಅಂತಾರೆ. ನಿಯತ್ತಿಗೂ ನಾಯಿಯೇ ಹೆಸರು. ಆದ್ರೆ ಎಲ್ಲ ಶ್ವಾನಗಳಿಗಿಂತ ಬಾಳ ಡಿಫ್ರೆಂಟ್ ನಾಯಿ ಇಲ್ಲಿದೆ ನೋಡಿ.
ಮಹಾರಾಷ್ಟ್ರದ ಸಿದ್ದತೆಕ್ ನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದ ಅಂಗಳದಲ್ಲಿರುವ ಈ ನಾಯಿ ದರ್ಶನ ಪಡೆದು ಬಂದ ಭಕ್ತರಿಗೆ ಆಶೀರ್ವಾದ ಮಾಡ್ತಾ ಇದೆ. ಒಂದು ವೇಳೆ ಯಾರಾದ್ರೂ ಈ ಆಶೀರ್ವಾದ ಪಡೆಯದೇ ಮುಂದೆ ಸಾಗಿದ್ರೆ ಅಂತವರಿಗೆ ಕುಳಿತಲ್ಲಿಂದಲೇ ಮುಂಗೈ ಎತ್ತಿ ಆಶೀರ್ವಾದ ಮಾಡುತ್ತೆ ಈ ನಾಯಿ.
ಇದನ್ನೆಲ್ಲ ನೋಡಿದ ಕೆಲ ಭಕ್ತರು ಏನಿದು ಚೇಷ್ಟೆ ಅಂತಾ ಮಜಾ ತಗೊಂಡ್ರೆ, ಇನ್ನೂ ಕೆಲ ಭಕ್ತರು ಇದರ ಹಿಂದೆ ಏನೋ ದೈವೀ ಶಕ್ತಿ ಇದೆ ಎಂದು ಆಶೀರ್ವಾದ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ದೇವಸ್ಥಾನ ಪರಿಸರದ ಪ್ರಭಾವ ಈ ನಾಯಿಯ ಮೇಲಾಗಿದೆ ಅಷ್ಟೇ ಎಂದು ವಾದಿಸುತ್ತಿದ್ದಾರೆ. ಈ ವೀಡಿಯೋ ಈಗ ಎಲ್ಲ ಕಡೆ ವೈರಲ್ ಆಗಿದೆ.
PublicNext
13/01/2021 09:08 pm