ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗದಲ್ಲಿ ಕೋತಿ ಮಗ್ನ..!

ಯಾರಾದರೂ ಬಹಳ ಕೀಟಲೆ ಮಾಡಿದ್ರೆ ಸಾಕು 'ಲೇ ನೀ ಬಹಳ ಮಂಗ್ಯಾ ಆಗಿ, ಮಂಗನ ಆಟ ಬಿಡು' ಅಂತ ಹಿರಿಯರು ಬೈಯೋದನ್ನು ಕೇಳಿದ್ದೇವೆ. ಅಷ್ಟೇ ಯಾಕೆ ಒಮ್ಮೊಮ್ಮೆ ನಾವೇ ಬೈಸಿಕೊಂಡಿದ್ದೂ ಉಂಟು. ಆದರೆ ಇಲ್ಲೊಂದು ಕೋತಿ ಯೋಗದಲ್ಲಿ ಮಗ್ನವಾಗಿದೆ.

ಮರವೊಂದರ ಕೆಳಗೆ ಧ್ಯಾನ ಅಥವಾ ಪ್ರಾಣಾಯಾಮ ಮಾಡುವಂತೆ ಕೋತಿಯೊಂದು ತನ್ನ ತೊಡೆಯ ಮೇಲೆ ಕೈ ಇಟ್ಟು ಕುಳಿತಿರುತ್ತದೆ. 22 ಸೆಕೆಂಡ್‌ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ನೆಟ್ಟಿಗರು ಕೋತಿ ಧ್ಯಾನಕ್ಕೆ ಕುಳಿತಿದೆ ಎಂದರೆ, ಇನ್ನೂ ಕೆಲವರು ಯೋಗ ಮಾಡುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Edited By : Nagesh Gaonkar
PublicNext

PublicNext

10/01/2021 12:00 pm

Cinque Terre

86.51 K

Cinque Terre

1

ಸಂಬಂಧಿತ ಸುದ್ದಿ