ಸಂಗೀತ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅನೇಕ ಬಾರಿ ದುಃಖ, ಬೇಸರ ಉಂಟಾದಾಗ ಹಾಡು ಕೇಳುತ್ತೇವೆ, ಸಂಗೀತವನ್ನು ಆನಂದಿಸುತ್ತೇವೆ.
ಪ್ರಾಣಿಗಳು ಇದಕ್ಕೆ ಹೊರತಾಗಿಲ್ಲ. ಆಕಳು, ಬೆಕ್ಕು, ನಾಯಿ ಸೇರಿದಂತೆ ವಿವಿಧ ಪ್ರಾಣಿಗಳು ಸಂಗೀತವನ್ನು ಆನಂದಿಸುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ.
ಆದರೆ ಇಲ್ಲೊಂದು ಜಾಣ ಬೆಕ್ಕು ಒಂದು ಹೆಜ್ಜೆ ಮುಂದೆ ಇಟ್ಟು ತಾನೇ ಪಿಯಾನೋ ನುಡಿಸಿ ಸೈ ಎನಿಸಿಕೊಂಡಿದೆ.
ರಷ್ಯಾದ ಗಿಟಾರ್ ವಾದಕ ಮಾರ್ಸೆಲ್ ಗಿಲ್ಮನೋವ್ ಅವರು ತಮ್ಮ ಬೆಕ್ಕಿನೊಂದಿಗೆ ಅದ್ಭುತ ಸಂಗೀತ ಪ್ರದರ್ಶನ ನೀಡಿದ್ದಾರೆ.
ಬೆಕ್ಕು ಪಿಯಾನೋದ ಮುಂಭಾಗದಲ್ಲಿ ಎರಡು ಕಾಲುಗಳಲ್ಲಿ ನಿಂತು ತನ್ನ ಮುಂಗಾಲಿನ ಸಹಾಯದಿಂದ ಪಿಯಾನೋ ನುಡಿಸಿದ್ದನ್ನು ನೋಡುವುದೇ ಖುಷಿ.
36 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
PublicNext
17/12/2020 04:08 pm