ಕಾರವಾರ (ಉತ್ತರಕನ್ನಡ): ಹೊನ್ನಾವರದ ಯುವಕ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಇದೀಗ ಸಿಬಿಐ ಸಲ್ಲಿಸಿರುವ ವರದಿ ಬಿಜೆಪಿಗೆ ಭಾರೀ ಮುಖಭಂಗವನ್ನುಂಟು ಮಾಡುತ್ತಿದ್ದು, ಕಾಂಗ್ರೆಸ್ ನಾಯಕರುಗಳು ಬಿಜೆಪಿಗರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಈ ನಡುವೆ ಟ್ವೀಟ್ ಮಾಡಿರುವ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಬಿಜೆಪಿಗರು ಕ್ಷಮೆ ಯಾಚಿಸಲು ಆಗ್ರಹಿಸಿದ್ದಾರೆ. ಮೈ ಪರಚಿ, ಬೀದಿಯಲ್ಲಿ ಅರಚಿ, ರಂಪಾಟ-ರಾದ್ದಾಂತ ಮಾಡಿ ಸ್ವಾರ್ಥ ಅಧಿಕಾರದ ಬೇಳೆ ಬೆಳೆಸಿಕೊಂಡ ಬಿಜೆಪಿಗರೇ ಜನರೆದರು ಕ್ಷಮೆ ಕೇಳುವ ಮುಖ ಇದ್ಯಾ? ಎಂದು ಪ್ರಶ್ನಿಸಿದ್ದಾರೆ.
ಡಿಕೆ ರವಿ ಕೊಲೆಯಾಗಿದೆ ಎಂದು ಬಿಜೆಪಿ ಹೇಳಿತ್ತು. ಅದೊಂದು ಆತ್ಮಹತ್ಯೆ ಎಂದು ಸಿಬಿಐ ವರದಿ ಸಲ್ಲಿಸಿತ್ತು. ತೀರ್ಥಹಳ್ಳಿ ನಂದಿತಾಳದ್ದು ಕೊಲೆ ಎಂದು ಬಿಜೆಪಿ ಹೇಳಿತ್ತು. ಇದೊಂದು ಆತ್ಮಹತ್ಯೆ ಎಂದು ಸಿಐಡಿ ವರದಿ ಸಲ್ಲಿಸಿತ್ತು. ಪರೇಶ್ ಮೇಸ್ತಾನದ್ದೂ ಕೊಲೆಯೆಂದು ಬಿಜೆಪಿ ಹೇಳಿದರೆ, ಸಿಬಿಐ ಇದೊಂದು ಆಕಸ್ಮಿಕ ಸಾವು ಎಂದು ವರದಿ ನೀಡಿದೆ ಎಂದಿದ್ದಾರೆ.
Kshetra Samachara
04/10/2022 01:57 pm