ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ವಿಶ್ವ ಮೀನುಗಾರಿಕಾ ದಿನಾಚರಣೆ ಪ್ರಯುಕ್ತ ಮುರುಡೇಶ್ವರ ಗಾಲ್ಫ್ ಮೈದಾನದಲ್ಲಿ ರಾಜ್ಯ ಮಟ್ಟದ “ಮತ್ಸ್ಯಮೇಳ”

ಭಟ್ಕಳ: ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ವಿಶ್ವ ಮೀನುಗಾರಿಕೆ ದಿನಾಚರಣೆಯನ್ನು ಮುರುಡೇಶ್ವರ ಸಮೀಪದ ಗಾಲ್ಫ್ ಮೈದಾನದಲ್ಲಿ ಆಚರಿಸುತ್ತಿದ್ದೇವೆ ಎಂದು ಮೀನುಗಾರಿಕಾ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಹೇಳಿದರು.

ಮುರುಡೇಶ್ವರ ಗಾಲ್ಫ್ ರೆಸಾರ್ಟ್ ಸಭಾಭವನದಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದಿಂದ ವಿಶ್ವ ಮೀನುಗಾರಿಕಾ ದಿನಾಚರಣೆ ಆಚರಿಸುತ್ತಿದ್ದೇವೆ. ಆದರೆ ಬೆಂಗಳೂರಿಗೆ ಮಾತ್ರ ಈ ದಿನಾಚರಣೆ ಸೀಮಿತವಾಗಿತ್ತು. ಮೊದಲ ಬಾರಿಗೆ ಕಡಲತಡಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.

ವಿಶ್ವ ಮೀನುಗಾರಿಕೆ ದಿನಾಚರಣೆ ಕಾಟಾಚಾರಕ್ಕೆ ಮಾಡುತ್ತಿಲ್ಲ. ರಾಜ್ಯದ ಎಲ್ಲಾ ಮೀನುಗಾರರನ್ನ ಒಂದೆಡೆ ಸೇರಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 500 ವಿಧದ ಮೀನಿನ‌ ಬಗೆಯ ಪ್ರದರ್ಶನ ಮಾಡಲಾಗುತ್ತಿದೆ. ಮೀನಿನ ಪರಿಚಯ ಎಲ್ಲರಿಗೂ ಮಾಡಲು ಪ್ರಯತ್ನ ಪಡಲಾಗುವುದು ಎಂದರು.

ಚಿಪ್ಪಿಕಲ್ಲು, ಮೀನುಗಳನ್ನ ಸುರಂಗದಲ್ಲಿ ನೋಡಿ ಸಾಗುವ ರೀತಿಯಲ್ಲಿ ವೇದಿಕೆ ಸಿದ್ದಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿಯೇ ಈ ವಿಶೇಷ ಕಾರ್ಯಕ್ರಮ ಮಾಡುತ್ತಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿಕೊಂಡರು.

ಮನರಂಜನಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಅರ್ಜುನ್ ಜನ್ಯ, ಅನುಶ್ರೀ, ದಿವ್ಯಾ ಮಲ್ನಾಡ್ ಸೇರಿ ಹಲವರು ಆಗಮಿಸುತ್ತಾರೆ. ಮೂರು ದಿನ ನಡೆಯುವ ಉತ್ಸವದಲ್ಲಿ ಸುಮಾರು ಐದು ಸಾವಿರ ಜನರಿಗೆ ಉಚಿತ ಊಟ ಕೊಡುವ ವ್ಯವಸ್ಥೆ ಮಾಡಲಾಗಿದೆ.‌ ಇದರೊಟ್ಟಿಗೆ ಮನರಂಜನೆಯನ್ನ ಸವಿಯಲಿ ಎನ್ನುವುದು ನಮ್ಮ ‌ಉದ್ದೇಶ ಎಂದರು.

ರಾಜ್ಯದ ವಿವಿಧ ಭಾಗದಿಂದ ಸುಮಾರು 5 ಲಕ್ಷ ಜನರು ಬರುವ ನಿರೀಕ್ಷೆ ಇದೆ.‌ ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಮೂರು ದಿನ ಮೀನುಗಾರರ ಹಬ್ಬ ನಡೆಯಲಿದೆ ಎಂದರು.

ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ‌ ಶಿವಕುಮಾರ್ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ. ಮೀನುಗಾರರ ಸಮಸ್ಯೆಗಳ ಬಗ್ಗೆ ಸಿಎಂ, ಡಿಸಿಎಂ ಬಳಿ ತಿಳಿಸಲಾಗುವುದು. ಮೀನುಗಾರರಿಗೆ ಉಪಯೋಗ ಆಗುವ ಹಲವು ವಿಚಾರವನ್ನ ಘೋಷಣೆ ಮಾಡಲಾಗುವುದು ಎಂದರು.

Edited By : Nagesh Gaonkar
PublicNext

PublicNext

19/11/2024 10:20 pm

Cinque Terre

43.62 K

Cinque Terre

0

ಸಂಬಂಧಿತ ಸುದ್ದಿ