ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕಾರವಾರ (ಉತ್ತರಕನ್ನಡ): ಉತ್ತರಕನ್ನಡ ಜಿಲ್ಲೆಯಲ್ಲೇ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪುರಾಣ ಪ್ರಸಿದ್ಧ ಗೋಕರ್ಣದ ರಸ್ತೆಗೆ ತೇಪೆ ಹಚ್ಚಲು ಕಳಪೆ ಸಿಮೆಂಟ್ ಕಳುಹಿಸಿಕೊಟ್ಟು ಲೋಕೋಪಯೋಗಿ ಇಲಾಖೆ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.

ಗೋಕರ್ಣದ ರಸ್ತೆ ಹದಗೆಟ್ಟು ಕಳೆದ ನಾಲ್ಕೈದು ತಿಂಗಳಿನಿಂದ ಇಲ್ಲಿಯ ಗ್ರಾಮಸ್ಥರು ದುರಸ್ತಿಗೆ ಆಗ್ರಹಿಸುತ್ತಿದ್ದರು. ತೊರ್ಕೆ ಗ್ರಾಮ ಪಂಚಾಯತಿಯಿಂದಲೂ ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿತ್ತು. ಆದರೂ ಕಿವಿಗೊಡದ ಅಧಿಕಾರಿಗಳು, ವಿಳಂಬವಾಗಿ ಇಂದು ರಸ್ತೆ ದುರಸ್ತಿಗೆ ಕಾರ್ಮಿಕರನ್ನ ಕಳುಹಿಸಿಕೊಟ್ಟಿದ್ದಾರೆ.

ಆದರೆ ಹಿತ್ತಲಮಕ್ಕಿಯ ಬಳಿ ವೇಸ್ಟ್ ಸಿಮೆಂಟ್, ಅಂದ್ರೆ ಗಟ್ಟಿಯಾಗಿರೋ, ಕಳಪೆ ಸಿಮೆಂಟ್ ಅನ್ನ ರಸ್ತೆಯ ಹೊಂಡಗಳಿಗೆ ತುಂಬಿ, ರಸ್ತೆ ದುರಸ್ತಿಪಡಿಸಲು ಮುಂದಾದ ವೇಳೆ ಗ್ರಾಮ ಪಂಚಾಯತಿ ಸದಸ್ಯರಿಗೆ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ ಎನ್ನುವವರು ಸ್ಥಳದಿಂದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಪಿಡಬ್ಲ್ಯುಡಿ ಅಧಿಕಾರಿಗಳ ಬೇಜವ್ದಾರಿತನದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Edited By : Shivu K
Kshetra Samachara

Kshetra Samachara

26/09/2022 04:17 pm

Cinque Terre

5.28 K

Cinque Terre

0