ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ಬೀದಿ ನಾಯಿಗಳನ್ನು ಕಾಡಿಗೆ ಬಿಟ್ಟ ಪುರಸಭೆ ಎಲ್ಲಿದೆ ಕಾನೂನು ?

ಕಾರವಾರ : ಹಳಿಯಾಳ ಪುರಸಭೆ ಮುಖ್ಯಾಧಿಕಾರಿಗಳ ಆದೇಶದ ಮೇರೆಗೆ ಬೀದಿ ನಾಯಿಗಳನ್ನು ಸಿಬ್ಬಂದಿ ಅಮಾನುಷವಾಗಿ ಎಳೆದೊಯ್ದು ಕಾಡಿಗೆ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಿ ನೀರು, ಆಹಾರ ಹಾಗೂ ಆಶ್ರಯ ಒದಗಿಸಬೇಕಿತ್ತು. ಆದರೆ, Prevention of Cruelty To Animal Act-1960 ಕಾನೂನು ಉಲ್ಲಂಘನೆ ಮಾಡಿ, ಪುರಸಭೆ ಸಿಬ್ಬಂದಿ ರಾಕ್ಷಸರಂತೆ ಎಳೆದಾಡಿ ಟಾಟಾ ಏಸ್ ಗಾಡಿಯಲ್ಲಿ 80-90 ಬೀದಿ ನಾಯಿಗಳನ್ನು ಕೊಂಡೊಯ್ದು ಕಾಡಿಗೆ ಬಿಟ್ಟಿದ್ದಾರೆ.

ನೀರು, ಆಹಾರ ಒದಗಿಸದೇ ಕಾಡು ಪ್ರಾಣಿಗಳಿಗೆ ಆಹಾರವಾಗುವಂತೆ ದಟ್ಟ ಕಾಡಿನಲ್ಲಿ ನಾಯಿಗಳನ್ನು ಬಿಡಲಾಗಿದ್ದು, ಒಂದು ವೇಳೆ ನಾಯಿಗಳಿಗೆ ಯಾವುದೇ ಸೋಂಕುಗಳಿದ್ದರೂ ಅದು ಕಾಡು ಪ್ರಾಣಿಗಳಿಗೆ ಹಬ್ಬುವ ಸಾಧ್ಯತೆ ಇದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಈ ಅಮಾನವೀಯ ಕೃತ್ಯದ ವಿಡಿಯೋ ಹರಿದಾಡುತ್ತಿದ್ದು, ಹಳಿಯಾಳದ ಸ್ಥಳೀಯರು ನೀಡಿದ ದೂರಿನ‌ ಹಿನ್ನೆಲೆ ಮುಖ್ಯ ಪಶುವೈದ್ಯಾಧಿಕಾರಿಯಿಂದ ಹಳಿಯಾದ ಪುರಸಭೆ‌ ಮುಖ್ಯಾಧಿಕಾರಿಗೆ ನೋಟೀಸ್ ಜಾರಿಗೊಳಿಸಲಾಗಿದೆ.

ಕಾನೂನು ಉಲ್ಲಂಘನೆ ನಡೆಸಿರುವ ಹಿನ್ನೆಲೆ ಸ್ಪಷ್ಟೀಕರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದ್ದು, ಎನಿಮಲ್ ಹೆಲ್ಪ್ ಲೈನ್‌ಗೂ ದೂರು ಹಳಿಯಾಳದ ನಾಗರಿಕರು ದೂರು ಸಲ್ಲಿಸಿದ್ದಾರೆ.

Edited By : Nagesh Gaonkar
PublicNext

PublicNext

24/09/2022 09:53 pm

Cinque Terre

34.39 K

Cinque Terre

3