ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: PFI ನಿಷೇಧದ ಹಿನ್ನಲೆ ಭಟ್ಕಳದಲ್ಲಿ ಕಾರ್ಯಕರ್ತರ ಮನೆಗಳಲ್ಲಿ ಪೊಲೀಸ್ ತಲಾಶ್

ಕಾರವಾರ: ಪಿಎಫ್‌ಐ ಸಂಘಟನೆ ನಿಷೇಧ ಹಿನ್ನಲೆ ಭಟ್ಕಳದ ಎರಡು ಕಡೆ ಪೊಲೀಸರು ದಾಳಿ ನಡೆಸಿ, ಪಿಎಫ್‌ಐ ಕಾರ್ಯಕರ್ತರ ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಭಟ್ಕಳದ ಮೂಸಾನಗರ ಮತ್ತು ಜಾಮಿಯಾಬಾದ್ ಕ್ರಾಸ್ ಬಳಿ ಇರುವ ಸಲ್ಮಾನ್ ಮತ್ತು ಕರೀಮ್ ಎಂಬುವವರ ಮನೆಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಪಿಎಫ್‌ಐ ಸಂಘಟನೆಗೆ ಸಂಬಂಧಿಸಿದಂತೆ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಉಪವಿಭಾಗಾಧಿಕಾರಿ ಮಮತಾದೇವಿ, ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಭಟ್ಕಳ ನಗರ ಮತ್ತು ಗ್ರಾಮೀಣ ಠಾಣಾ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Edited By : Somashekar
Kshetra Samachara

Kshetra Samachara

28/09/2022 08:28 pm

Cinque Terre

9.38 K

Cinque Terre

0

ಸಂಬಂಧಿತ ಸುದ್ದಿ