ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ರೋಡ್ ಕ್ಲೀನರ್ ಯಂತ್ರ ನಿರ್ಮಿಸಿದ ಭಟ್ಕಳದ ವಿದ್ಯಾರ್ಥಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗಾಂಧಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಸಂದೇಶ ನಾಯ್ಕ ಸಿದ್ಧಪಡಿಸಿರುವ ರೋಡ್ ಕ್ಲೀನರ್ ಯಂತ್ರ, ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಇನ್ಸ್ಪಾಯರ್ಡ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಸೈಕಲ್ ಅಂಗಡಿಯಿಂದ ಪಡೆದ 2 ಚಕ್ರ, ಚೈನ್ ಮತ್ತು ಸಾಕೆಟ್, ಎಮ್‌.ಎಸ್ ಶೀಟ್, ಪೈಪ್, ಕಬ್ಬಿಣದ ಸರಳು, ಬೇರಿಂಗ್ ಇತ್ಯಾದಿಗಳನ್ನು ಬಳಸಿ ಅತಿ ಕಡಿಮೆ, ಅಂದ್ರೆ 3-4 ಸಾವಿರ ರೂಪಾಯಿ ಖರ್ಚಿನಲ್ಲಿ ಈ ಯಂತ್ರವನ್ನು ಸಿದ್ಧಪಡಿಸಲಾಗಿದೆ.

ಶಿಕ್ಷಕ ಹೇಮಾವತಿ ನಾಯ್ಕ ವಿದ್ಯಾರ್ಥಿ ಸಂದೇಶನಿಗೆ ಮಾರ್ಗದರ್ಶನ ನೀಡಿದ್ದರು. ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿರುವ ಬಾಟಲಿ, ಪ್ಲಾಸ್ಟಿಕ್ ಕವರ್, ಕಸ ಕಡ್ಡಿಗಳನ್ನು ಈ ಯಂತ್ರದಿಂದ ಸುಲಭವಾಗಿ ವಿಲೇವಾರಿ ಮಾಡಲು ಬಳಸಬಹುದಾಗಿದೆ. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯ 1000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

Edited By : Manjunath H D
PublicNext

PublicNext

12/09/2022 06:53 pm

Cinque Terre

28.59 K

Cinque Terre

5